ಗುರುಮಠಕಲ್‌ನಲ್ಲಿ ಎಸ್‌ಐಆರ್ ಜಾಗೃತಿ ಅಭಿಯಾನ: ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಅರಿವು

Update: 2026-07-17 18:30 IST

ಗುರುಮಠಕಲ್: ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರು ಹಾಗೂ ಶ್ರೀ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರಾದ ಬಾಬುರಾವ್ ಚಿಂಚನ್ಸೂರ್ ಅವರ ನೇತೃತ್ವದಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್) ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ನಡೆಯಿತು.

ಅಭಿಯಾನದ ಅಂಗವಾಗಿ ಹರಿಜನವಾಡ, ವಾರ್ಡ್ ಸಂಖ್ಯೆ 12 ಮತ್ತು 13 ಹಾಗೂ ಕೆ.ಎಚ್.ಡಿ ಕಾಲೋನಿ (ವಾರ್ಡ್ ಸಂಖ್ಯೆ 21) ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ಹೊಸ ಮತದಾರರ ನೋಂದಣಿ ಹಾಗೂ ದೋಷಗಳ ಸರಿಪಡಿಸುವಿಕೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

ಮತದಾನ ಹಕ್ಕು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಈ ವೇಳೆ ತಿಳಿಸಲಾಯಿತು.

ಯುವಜನತೆ ಹಾಗೂ ಹೊಸ ಮತದಾರರನ್ನು ಗುರಿಯಾಗಿಸಿಕೊಂಡು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಜಾಗೃತಿ ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚಪೇಟ್ಲಾ, ಭೀಮಶೆಪ್ಪ ಮಾಸ್ಟರ್, ಬಾಬು ತಲಾರಿ, ಕಾಶಪ್ಪ ಚಿನಾಕಾರ್, ಚಂದ್ ಪಾಷಾ, ಅಶೋಕ್ ಶನಿವಾರಂ, ಫಯಾಜ್ ಅಹ್ಮದ್, ಮಾನಿಕ್ ಮುಕ್ಕಡಿ, ಭೀಮಶಪ್ಪ ಶನಿವಾರ, ಸಾಬಣ್ಣ ಗಾಜರ್ ಕೋಟ್, ಬಸವರಾಜ್ ನೀರೇಟಿ, ಬಾಬಾ, ವಸಂತ್, ಕಾಶಪ್ಪ, ವಾಯ್ದ್ ಚಿಂತುಕುಂಟಿ, ಆದಿಲ್, ಮುರಳಿದಾರ್, ಶರಣಪ್ಪ ಗಾಜರ್ ಕೋಟ್, ಸಾಹೇಬಣ್ಣ ಪೂಜಾರಿ, ಕಿಷ್ಟಪ್ಪ ಸೈದಾಪುಳ, ಚೈತನ್, ಸಂತೋಷ್ ವೆಂಕಟಪ್ಪ, ಸರೋಜಾ ಸೇರಿದಂತೆ ಅನೇಕ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News