ಸುರಪುರ | ಪತ್ನಿಯ ಮೇಲೆ ದೌರ್ಜನ್ಯ : ಮಾಜಿ ಪುರಸಭೆ ಸದಸ್ಯನ ವಿರುದ್ಧ ಪ್ರಕರಣ ದಾಖಲು
Update: 2025-09-23 19:06 IST
ಯಾದಗಿರಿ: ಸುರಪುರ ತಾಲೂಕಿನ ಹಳ್ಳೆರದೊಡ್ಡಿ ಗ್ರಾಮದಲ್ಲಿ ಮಾಜಿ ಪುರಸಭೆ ಸದಸ್ಯ ಭೀಮನಗೌಡ ಹಳ್ಳಿಗೌಡ ತನ್ನ ಪತ್ನಿ ಜಯಶ್ರೀಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ದೌರ್ಜನ್ಯ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಪತ್ನಿ ಜಯಶ್ರೀಯ ಹೇಳಿಕೆಯ ಪ್ರಕಾರ, ಕಳೆದ ಐದು ವರ್ಷಗಳಿಂದ ಪತಿ ನಿರಂತರ ಹಿಂಸೆ ನೀಡುತ್ತಿದ್ದು, ಇತ್ತೀಚೆಗೆ ಕಾಲು ಮುರಿದುಕೊಳ್ಳುವ ಮಟ್ಟಿಗೆ ಹೊಡೆದಿದ್ದಾನೆ. “ನನ್ನ ಎದೆಗೆ ಒದ್ದು, ಜೀವ ಬೆದರಿಕೆ ಹಾಕಿ ಬಾಯ್ಮುಚ್ಚಿಸುತ್ತಿದ್ದ,” ಎಂದು ಮಾಧ್ಯಮಕ್ಕೆ ತಿಳಿಸಿದ್ದಾಳೆ.
ಘಟನೆ ಬಹಿರಂಗವಾದ ತಕ್ಷಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಪ್ರಸ್ತುತ ಜಯಶ್ರೀಯನ್ನು ಮಹಿಳಾ ಕಾಳಜಿ ಕೇಂದ್ರ (ಸಖಿ) ಯಲ್ಲಿ ಇರಿಸಲಾಗಿದೆ.
ಈ ಕುರಿತು ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ತನಿಖೆ ಮುಂದುವರಿಯುತ್ತಿದೆ.