ಸುರಪುರ | ಜಾತಿ ನಿಂದನೆ ಆರೋಪ : ಪ್ರಕರಣ ದಾಖಲಿಸಲು ಭೀಮ್ ಆರ್ಮಿ ವತಿಯಿಂದ ಡಿವೈಎಸ್ಪಿಗೆ ಮನವಿ
ಸುರಪುರ : ಚಟ್ನಳ್ಳಿ ಗ್ರಾಮದ ಅಶೋಕ ಪಾಟೀಲ್ ಎನ್ನುವ ವ್ಯಕ್ತಿ ಪರಿಶಿಷ್ಟ ಜಾತಿಯವರ ಕುರಿತು ಅವಮಾನಿಸಿ ಮಾತನಾಡಿದ್ದು, ಆ ವ್ಯಕ್ತಿಯ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಭೀಮ್ ಆರ್ಮಿ ಸಂಘಟನೆಯ ಹುಣಸಗಿ ತಾಲೂಕ ಅಧ್ಯಕ್ಷ ಸಿದ್ದಪ್ಪ ದೊಡ್ಡಮನಿ ನಗರದಲ್ಲಿ ಡಿವೈಎಸ್ಪಿ ಗೆ ಮನವಿ ಸಲ್ಲಿಸ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಮನೆಯಲ್ಲಿ ಜಗಳ ಮಾಡುವಾಗ ಅನಾ ಅಗತ್ಯವಾಗಿ ಹೊಲೆಯ ಮತ್ತು ಮಾದಿಗ ಎನ್ನುವ ಪದವನು ಬಳಸಿ ತಮ್ಮ ಕುಟುಂಬದವರಿಗೆ ಅವಾಚ್ಯವಾಗಿ ನಿಂದಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದ ಪರಿಶಿಷ್ಟ ಜಾತಿಯವರ ಅವಮಾನಿಸಿರುವ ಅಶೋಕ ಪಾಟೀಲ್ ಕುರಿತು ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಜಾತಿ ನಿಂದನೆ ಮಾಡಿರುವ ಅಶೋಕ ಪಾಟೀಲ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು.
ನಂತರ ಡಿವೈಎಸ್ಪಿಗೆ ಬರೆದ ಮನವಿ ಸುರಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್ ಎಂ ಅವರ ಮೂಲಕ ಸಲ್ಲಿಸಿ ಒತ್ತಾಯಿಸಿದರು.
ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಸುರಪುರ ತಾಲೂಕ ಅಧ್ಯಕ್ಷ ಶರಣಪ್ಪ ಹೊಸಮನಿ, ಹುಣಸಗಿ ತಾಲೂಕ ಪ್ರಧಾನ ಕಾರ್ಯದರ್ಶಿ, ಕಿರಣ ವಜ್ಜಲ್ ಇತರರು ಭಾಗವಹಿಸಿದ್ದರು.