ಸುರಪುರ | ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಚಾಲನೆ
ಸುರಪುರ : ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ನಿರ್ಮಿಸುವಂತೆ ಶಾಸಕ ರಾಜಾ ವೇಣುಗೋಪಾಲ ನಾಯಕ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ತಿಳಿಸಿದರು.
ನಗರದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ನಿರ್ಮಾಣ ಸೇರಿದಂತೆ ಸುರಪುರ ಮತ್ತು ಹುಣಸಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿ, ಕಾಮಗಾರಿಗಳಿಗೆ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸಬೇಕು ಮತ್ತು ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದರು.
ಅಧಿಕಾರಿಗಳು ಕಾಲ ಕಾಲಕ್ಕೆ ಕಾಮಗಾರಿಯ ತಪಾಸಣೆಯನ್ನು ಕೈಗೊಂಡು ಕಾಲ ಮಿತಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ 6 ಕೋಣೆಗಳ ನಿರ್ಮಾಣ, ರಂಗಂಪೇಟ ದಿಂದ ದೇವಿಕೇರಾ ಗ್ರಾಮಕ್ಕೆ ಹೋಗುವ ರಸ್ತೆ ನಿರ್ಮಾಣ ಕಾಮಗಾರಿ, ಶಾಂತಪೂರ ಗ್ರಾಮದಿಂದ ಹಾಲಬಾವಿ ಗ್ರಾಮದ ವರೆಗೆ ರಸ್ತೆ ಮತ್ತು ಸಿ.ಡಿ ನಿರ್ಮಾಣ ಕಾಮಗಾರಿ, ಹಾವಿನಾಳ, ಪೇಠ ಅಮ್ಮಾಪುರ, ಮಂಗಳೂರು, ನಾಗರಾಳ, ರೇವುನಾಯ್ಕ ತಾಂಡಾ, ಮದಲಿಂಗನಾಳ, ಜುಮಾಲಪುರ, ರಾಜವಾಳ ತಾಂಡ, ಬಲಶಟ್ಟಿಹಾಳ, ಬಾಚಿಮಟ್ಟಿ ಗ್ರಾಮಗಳಲ್ಲಿ ಸಮುದಾಯ ಭವನಗಳ ನಿರ್ಮಾಣ ಸೇರಿ ಒಟ್ಟು 5.54 ಕೋಟಿ ರೂಪಾಯಿಗಳ ಅನುದಾನದಲ್ಲಿ ಕಾಮಗಾರಿಗಳ ನಿರ್ಮಾಣಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಮಲ್ಲಣ್ಣ ಸಾಹುಕಾರ ಮುಧೋಳ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ, ನಗರಸಭೆ ಅಧ್ಯಕ್ಷೆ ಹೀನಾಕೌಸರ್ ಶಕೀಲ ಅಹ್ಮದ್, ಉಪಾಧ್ಯಕ್ಷ, ರಾಜಾ ಪಿಡ್ಡ ನಾಯಕ(ತಾತಾ), ನಗರಸಭೆ ಸದಸ್ಯರಾದ, ನಾಸೀರ ಕುಂಡಾಲೆ, ಜುಮ್ಮಣ್ಣ ಕುಂಬಾರಪೇಟ, ಮಹಿಬೂಬ ಸಾಬ, ಸಾಹೇಬಗೌಡ ಮಾಲಿ ಪಾಟೀಲ್, ರಾಮನಗೌಡ ಮಾಲಿ ಪಾಟೀಲ್, ರಂಗನಗೌಡ ಪಾಟೀಲ್, ರವಿ ಸಾಹುಕಾರ್ ಅಲ್ದಾಳ, ಬೀರಲಿಂಗ ಮಗ್ಗದ, ಶಾಂತಮೂರ್ತಿ ಹಿರೇಮಠ, ತಿಪ್ಪಣ್ಣ ಕುಲಕರ್ಣಿ, ಬಾಬು ಭಾಗವಾನ್, ಚಂದ್ರು ಬಿಲಕಲ್, ರಾಮಚಂದ್ರ ಪೂಜಾರಿ, ಯಂಕಪ್ಪ ಹೊಸಮನಿ ಅನೇಕರು ಭಾಗವಹಿಸಿದ್ದರು.