×
Ad

ಸುರಪುರ | ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ಶಾಸಕ ಆರ್.ವಿ ನಾಯಕ ಭೇಟಿ

Update: 2025-08-28 19:36 IST

ಸುರಪುರ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿಗಳಾಗಿದ್ದಾರೆ. ಅವರ ಈ ಸ್ಥಳದಲ್ಲಿ ತಾವು ಅನೇಕ ದಿನಗಳಿಂದ ಧರಣಿ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಯಾರಿಗೂ ಅನ್ಯಾಯವಾಗದಂತೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.

ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಭೂಮಿ ನಿವೇಶನ ಮಂಜೂರಾತಿ ಹೋರಾಟ ಸಮಿತ ಹಾಗೂ ದಲಿತ ಸಂಘಟನೆಗಳ ಒಕ್ಕೂಟ ದಿಂದ ಸರ್ವೇ ನಂಬರ್ 7/1ರ ಖಾರಿಜ್ ಖಾತಾ ಭೂಮಿ ಮಂಜೂರುಗೊಳಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಮ್ಮ ತಾತಾ ರಾಜಾ ಕುಮಾರ ನಾಯಕ, ನಮ್ಮ ತಂದೆ ರಾಜಾ ವೆಂಕಟಪ್ಪ ನಾಯಕ ಹಾಗೂ ನಾನು ರಾಜಾ ವೇಣುಗೋಪಾಲ ನಾಯಕ ಶಾಸಕನಾಗಿ ನಿಮಗಾಗಲಿ, ಸುರಪುರ ಜನತೆಗಾಗಲಿ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ತಿಳಿಸಿದರು.

ಅಲ್ಲದೆ ಈ ಜಾಗದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಶೀಘ್ರದಲ್ಲಿಯೇ ಪರಿಹಾರ ಕಲ್ಪಿಸಲಾಗುವುದು. ಆದ್ದರಿಂದ ಧರಣಿಯನ್ನು ನಿಲ್ಲಿಸುವಂತೆ ಮನವಿ ಮಾಡಿದರು.

ನಂತರ ಸಮಿತಿ ಅಧ್ಯಕ್ಷ ಮಾನಪ್ಪ ಕಟ್ಟಿಮನಿ ಮಾತನಾಡಿ, ತಾವು ಇಂದು ಆಗಮಿಸಿ ನಮ್ಮ ಮನವಿ ಆಲಿಸಿ ಮಾತನಾಡಿರುವುದು ಸಂತೋಷದ ಸಂಗತಿಯಾಗಿದೆ. ತಾವು ನೀಡಿರುವ ಭರವಸೆಯ ಕುರಿತು ನಮಗೆ ಸಹಮತವಿದೆ. ಆದರೆ ನಮ್ಮ ಬೇಡಿಕೆ ಈಡೇರುವವರೆಗೆ ಧರಣಿಯನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ವೆಂಕೋಬ ಯಾದವ್,ಮುಖಂಡರಾದ ವೆಂಕಟೇಶ ಹೊಸಮನಿ, ಶ್ರೀನಿವಾಸ ನಾಯಕ ಬೊಮ್ಮನಹಳ್ಳಿ, ರಾಹುಲ್ ಹುಲಿಮನಿ,ಮಾಳಪ್ಪ ಕಿರದಳ್ಳಿ,ಮಾನಪ್ಪ ಬಿಜಾಸಪುರ,ಮಲ್ಲು ಮುಷ್ಠಳ್ಳಿ,ಮಾನಪ್ಪ ಶೆಳ್ಳಗಿ,ಬಸವರಾಜ ದೊಡ್ಮನಿ,ಶರಣು ಹಸನಾಪುರ,ಚನ್ನಬಸಪ್ಪ ದೇವಾಪುರ, ರಮೇಶ ಬಡಿಗೇರ,ಶೇಖರ ಮಂಗಳೂರ, ಆಕಾಶ ಕಟ್ಟಿಮನಿ,ವೈಜನಾಥ ಹೊಸಮನಿ,ರಾಜು ಬಡಿಗೇರ,ವೀರಭದ್ರಪ್ಪ ತಳವಾರಗೇರ ಸೇರಿದಂತೆ ಕುಂಬಾರಪೇಟದ ಅನೇಕ ಜನ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News