×
Ad

ಸುರಪುರ | ಜನರು ಹೆಚ್ಚು ಜೈವಿಕ ಇಂಧನ ಸಸ್ಯಗಳನ್ನು ಬೆಳೆಯಬೇಕು : ಡಾ.ಅಮರೇಗೌಡ

Update: 2025-08-23 20:29 IST

ಸುರಪುರ: ಜನರು ಹೆಚ್ಚು ಹೆಚ್ಚು ಜೈವಿಕ ಇಂಧನ ಸಸ್ಯಗಳನ್ನು ಬೆಳೆಯಬೇಕು ಇದರಿಂದ ಮುಂದಿನ ದಿನಗಳಲ್ಲಿ ಬಹಳಷ್ಟು ಉಪಯುಕ್ತತೆ ಇದೆ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಅಮರೇಗೌಡ ಎ. ತಿಳಿಸಿದರು.

ತಾಲೂಕಿನ ಜೈವಿಕ ಇಂಧನ ಉದ್ಯಾನದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಜೈವಿಕ ಇಂಧನ ಉದ್ಯಾನ, ತಿಂಥಣಿ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಬಿವೃದ್ದಿ ಮಂಡಳಿ ಬೆಂಗಳೂರು ಸಹಯೋಗದಲ್ಲಿ ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಥಳೀಯವಾಗಿ ಜೈವಿಕ ಉತ್ಪಾದನೆ ಮಾಡಿದಾಗ ಪೆಟ್ರೋಲಿಯಂ ಆಮುದು ಕಡಿಮೆಗೊಂಡು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಸಾಧ್ಯ ಎಂದು ಹೇಳಿದರು.

ಕೇಂದ್ರದ ಸಂಯೋಜಕ ಡಾ.ಶ್ಯಾಮರಾವ ಕುಲಕರ್ಣಿ ಮಾತನಾಡಿದರು.

ತಿಂಥಣಿಯ ಮೌನೇಶ್ವರ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಾನದ ಆವರಣದಲ್ಲಿ ಹೊಂಗೆ ಸಸಿಗಳನ್ನು ನೆಡಲಾಯಿತು. ನಂತರ ಜೈವಿಕ ಡಿಸೈಲ್‌ನ್ನು ವಾಹನಗಳಿಗೆ ಬಳಸುವ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು, ಹೊಂಗೆ ಬೀಜ ಹೊಂದಿದ ಮಣ್ಣಿನ ಉಂಡೆಗಳನ್ನು ಗುಡ್ಡ ಪ್ರದೇಶದಲ್ಲಿ ಎರಚಲಾಯಿತು, ಗ್ರಾಮದಲ್ಲಿ ಶಾಲಾ ಮಕ್ಕಳಿಂದ ಜಾಥಾ ಹಮ್ಮಿಕೊಳ್ಳಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News