×
Ad

ಸುರಪುರ | ಕೊಲೆ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಪ್ರತಿಭಟನೆ

Update: 2025-09-12 19:18 IST

ಸುರಪುರ: ಮದಲಿಂಗನಾಳ ಗ್ರಾಮದ ದಲಿತ ಸಮುದಾಯದ ಭೀಮಣ್ಣ ಎನ್ನುವ ಯುವಕನ ಕೊಲೆ ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರು ನಗರದ ತಹಶಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಹಾದಿಮನಿ ಮಾತನಾಡಿ, ಮದಲಿಂಗನಾಳ ಗ್ರಾಮದ ದಲಿತ ಸಮುದಾಯದ ಯುವಕ ಭೀಮಣ್ಣನನ್ನು ಕೊಲೆ ಮಾಡಿ ನಾರಾಯಣಪುರ ಗ್ರಾಮದ ಬಳಿಯ ಬೋರುಕಾ ವಿದ್ಯುತ್‌ ಸ್ಥಾವರದ ಬಳಿಯ ಕಾಲುವೆಯಲ್ಲಿ ಬಿಸಾಕಿದ್ದು, ಮೃತದೇಹ ಸೆ.9 ರಂದು ಪತ್ತೆಯಾಗಿದೆ. ಕೂಡಲೇ ಕೊಲೆ ಮಾಡಿದ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆ ನೀಡಬೇಕು ಮತ್ತು ಯುವಕನ ಕುಟುಂಬಕ್ಕೆ ಪರಿಹಾರ ನೀಡಿ ನ್ಯಾಯ ಒದಗಿಸಬೇಕು. ನಿರ್ಲಕ್ಷ್ಯ ತೋರಿದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ನಂತರ ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಮಣ್ಣ ಕೋರಿ, ಮಾನಪ್ಪ ವಾಗಣಗೇರಾ, ಮೌನೇಶ ಅರಳಹಳ್ಳಿ, ಮರೆಪ್ಪ ಕಟ್ಟಿಮನಿ, ದುರಗಪ್ಪ ಬಡಿಗೇರ, ಧರ್ಮಣ್ಣ ಕಟ್ಟಿಮನಿ, ದುರಗಪ್ಪ ಹೊಸಮನಿ, ಮುದ್ದಪ್ಪ ಹೊಸಮನಿ, ಭೀಮರಾಯ ದೇವತ್ಕಲ್, ಲಕ್ಷ್ಮಣ ಆಲ್ದಾಳ, ಯಲ್ಲಪ್ಪ ಹೆಮ್ಮಡಗಿ, ಹಣಮಂತ ಅಡ್ಡೊಡಗಿ, ಮಲ್ಲು ಹೆಚ್.ಹುಲಿಮನಿ, ಮೌನೇಶ ಸ್ನೇಹಜೀವಿ, ಸೇರಿದಂತೆ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News