ಯಾದಗಿರಿ | ಡಾ.ವಿಷ್ಣುವರ್ಧನ್ ಅವರಿಗೆ ಮರಣೋತ್ತರ ʼಕರ್ನಾಟಕ ರತ್ನʼ ಪ್ರಶಸ್ತಿ : ವಿಷ್ಣು ಸೇನಾ ಸಮಿತಿಯಿಂದ ರಾಜ್ಯ ಸರಕಾರಕ್ಕೆ ಅಭಿನಂದನೆ
ಯಾದಗಿರಿ: ನಟ ಡಾ.ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ʼಕರ್ನಾಟಕ ರತ್ನʼ ಪ್ರಶಸ್ತಿಯನ್ನು ರಾಜ್ಯ ಸರ್ಕಾರದಿಂದ ಪ್ರದಾನ ಮಾಡಿರುವ ಹಿನ್ನೆಲೆಯಲ್ಲಿ, ಡಾ.ವಿಷ್ಣು ಸೇನಾ ಸಮಿತಿ ಸಂತೋಷ ವ್ಯಕ್ತಪಡಿಸಿದೆ. ಸಮಿತಿಯ ಯಾದಗಿರಿ ಜಿಲ್ಲಾಧ್ಯಕ್ಷ ರವಿಕುಮಾರ್ ದೇವರಮನಿ ಅವರು ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರಕ್ಕೂ ಹಾಗೂ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರಿಗೆ ಧನ್ಯವಾದ ಸಲ್ಲಿಸಿದರು.
"ಡಾ.ವಿಷ್ಣುವರ್ಧನ್ ಅವರು ಕೇವಲ ನಟರಲ್ಲ, ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕನ್ನಡಿಗರ ಹೃದಯಗಳನ್ನು ಗೆದ್ದ ವ್ಯಕ್ತಿ. ಅವರಿಗೆ ನೀಡಿರುವ ಈ ಗೌರವ, ಅಭಿಮಾನಿಗಳಿಗೆ ಹೆಮ್ಮೆ ಹಾಗೂ ಕನ್ನಡಿಗರ ಆತ್ಮಗೌರವವನ್ನು ಹೆಚ್ಚಿಸಿದೆ" ಎಂದು ರವಿಕುಮಾರ್ ದೇವರಮನಿ ಹೇಳಿದರು.
ಈ ಸಂದರ್ಭದಲ್ಲಿ ಶಾಸಿಂ ಪಟೇಲ್ ಗಡ್ಡೆಸೂಗೂರ, ದೇವು ಟಿ. ವಡಿಗೇರಾ, ದೇವು ಅರಿಕೇರಾ, ಸಿದ್ದು ಇಬ್ರಾಹಿಂಪೂರ, ಸಿದ್ದು ಗುರುಸಣಗಿ, ಸಣವೀರ ಹೊನಗೇರಾ, ಶಿವಶಂಕರ ವಿಶ್ವಕರ್ಮ, ಪ್ರಭುಗೌಡ, ಶಿವಯ್ಯ ಸ್ವಾಮಿ, ಭೀಮು ಪೂಜಾರಿ, ವಿಜಯಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.