×
Ad

ಯಾದಗಿರಿ| ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬೀದಿಗಿಳಿದು ಹೋರಾಟ: ಹಣುಮೇಗೌಡ ಎಚ್ಚರಿಕೆ

Update: 2025-11-29 19:56 IST

ಯಾದಗಿರಿ : ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ರಾಜ್ಯದಲ್ಲಿ ಅಹಿಂದ ಸಂಘಟನೆ ಬೀದಿಗಳಿದು ಹೋರಾಟ ಮಾಡಲಿದೆ ಎಂದು ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷ ಹಣಮೇಗೌಡ ಮರಕಲ್ ಎಚ್ಚರಿಕೆ ನೀಡಿದ್ದಾರೆ.  

ಶನಿವಾರ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಣಮೇಗೌಡ ಮರಕಲ್, ಸಿದ್ದರಾಮಯ್ಯ ಅವರು ಕಳೆದ ಎರಡುವರೇ ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಜನಪ್ರಿಯ ಸರಕಾರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇದಕ್ಕೆ ಸಿದ್ದರಾಮಯ್ಯ ಅವರ ಅನುಭವ ಹಾಗೂ ಬಡವರ ಬಗೆಗಿನ ಕಾಳಜಿಯೇ ಕಾರಣ. ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದಲೇ ಎರಡು ಸಲ ಶಾಸಕಾಂಗ ಪಕ್ಷದ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿದ್ದಾರೆ. 15 ಸಲ ಜನಪರ ಬಜೆಟ್ ಮಂಡಿಸಿ ರಾಜ್ಯದ ಆರ್ಥಿಕ ಸ್ಥಿತಿ ಸ್ಥಿರವಾಗಿ ಇರುವಂತೆಯೇ ಅವರು ನೋಡಿಕೊಂಡಿಕೊಂಡಿದ್ದಾರೆ. ಇವರ ಬದಲಿಗೆ ಬೇರೆಯವರು ಸಿಎಂ ಆಗಿದ್ದರೆ ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿರುತ್ತಿತ್ತು ಎಂದು ಹೇಳಿದರು.

ಈ ವೇಳೆ ಸಂಘಟನೆ ಪ್ರಧಾನ ಕಾರ್ಯದರ್ಶಿ ಅಶೋಕ್ ವಾಟ್ಕರ್, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News