ಯಾದಗಿರಿ | ಕಾನೂನಿಗೆ ಗೌರವ ನೀಡಿ ಶಾಂತಿಯುತ ಬದುಕು ಸಾಗಿಸಿ : ನ್ಯಾ.ಮರಿಯಪ್ಪ
ಕಾನೂನು ಅರಿವು-ನೆರವು ಕಾರ್ಯಕ್ರಮ
ಯಾದಗಿರಿ: ಕಾನೂನಿಗೆ ಎಲ್ಲರೂ ಗೌರವ ನೀಡಿದರೇ ಸಮಾಜದಲ್ಲಿ ಶಾಂತಿಯಿಂದ ಬದುಕಬಹುದು. ದೇಶದ ಕಾನೂನು ಎಲ್ಲರಿಗೂ ಇದೆ. ಅದನ್ನು ತಿಳಿದುಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಹೇಳಿದರು.
ನಗರದ ಚಾಮಾ ಫಂಕ್ಷನ್ ಹಾಲ್ ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಶಿ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರೀ ಹರಿ ಪ್ಯಾರಾಮೆಡಿಕಲ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕರು, ಮಾದಕ ವಸ್ತುಗಳು ಮಾನಸಿಕ ಆರೋಗ್ಯ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಯಿಯ ಗರ್ಭದಲ್ಲಿನ ಶಿಶುವಿಗೂ ಕಾನೂನು ಇದೆ. ಅದೇ ಭ್ರೂಣ ಹತ್ಯೆ. ಹುಟ್ಟಿದ ಪ್ರತಿಯೊಬ್ಬರಿಗೂ ಜನನ, ಮರಣ ಪತ್ರ ತೆಗೆದುಕೊಳ್ಳಲು ಕಾನೂನು ಎಂದು ಅವರು ಮಾರ್ಮಿಕವಾಗಿ ವಿವರಿಸಿದರು.
ಶಶಿ ಚಾರಿಟೇಬಲ್ ಮತ್ತು ವಿಜ್ಯೂಕೇಷನಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರಾದ ಹನುಮಂತಪ್ಪ ಶಿರಗೋಳ, ಮನೋವೈದ್ಯ ಡಾ.ಅಮೀತ ಕುಮಾರ, ಜಿಲ್ಲಾ ಬಾಲಾ ಕಾರ್ಮಿಕ ಯೋಜನಾ ನಿರ್ದೇಶಕರಾದ ರಿಯಾಜ್ ಪಟೇಲ್ ಮಾತನಾಡಿದರು.
ಶ್ರೀಹರಿ ಪ್ಯಾರಾಮೇಡಿಕಲ್ ಕಾಲೇಜು ಅಧ್ಯಕ್ಷರಾದ ಸುಭಾಶ್ಚಂದ್ರ ಮಾನೇಗಾರ ಉಪಸ್ಥಿತರಿದ್ದರು.
ಸೆಕ್ಸಸ್ ಗ್ರಂಥಾಲಯ ಮುಖ್ಯಸ್ಥರಾದ ಮಾಳಪ್ಪ ಯಾದವ್ ನಿರೂಪಣೆ ಮಾಡಿದರು. ಶಶಿ ಚಾರಿಟೇಬಲ್ ಟ್ರಸ್ಟಿನ ಮಲ್ಲಿಕಾರ್ಜುನ ಶಿರಗೋಳ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು, ಹಾಗೂ ಕೊನೆಗೆ ವಂದಿಸಿದರು.