×
Ad

ಯಾದಗಿರಿ | ಸುರಪುರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

Update: 2024-11-11 19:07 IST

ಯಾದಗಿರಿ : ಸುರಪುರ ನಗರದ ಪೊಲೀಸ್ ಠಾಣೆ ಬಳಿ ಇರುವ ಟಿಪ್ಪು ಸುಲ್ತಾನ್ ಚೌಕದಲ್ಲಿ ಟಿಪ್ಪು ಸುಲ್ತಾನ್ ಸೇವಾ ಸಂಘದ ನೇತೃತ್ವದಲ್ಲಿ ಟಿಪ್ಪು ಸುಲ್ತಾನ್ ಅವರ 275ನೇ ಜಯಂತಿಯನ್ನು ಆಚರಿಸಲಾಯಿತು.

ಹಾಫೀಸ್ ಅಬ್ದುಲ್ಲಾ ನೂರಿ ಮಾತನಾಡಿ, ಬ್ರಿಟಿಷರೊಂದಿಗೆ ಹೋರಾಡಿದ ಟಿಪ್ಪು ಸುಲ್ತಾನ್ ರಣರಂಗದಲ್ಲಿ ವೀರ ಮರಣವನ್ನು ಹೊಂದಿ ವೀರಯೋಧ ಆಗಿದ್ದಾರೆ. ಅವರ ಆಡಳಿತ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಕೈಗೊಂಡರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಖಾಜಾ ಖಲೀಲ್ ಅಹ್ಮದ್ ಅರಕೇರಿ, ಎಮ್.ಪಟೇಲ ,ದಾವೂದ್ ಪಠಾಣ, ಶ್ರೀನಿವಾಸ ನಾಯಕ ಬೊಮ್ಮನಳ್ಳಿ, ಶಕೀಲ್ ಅಹ್ಮದ್, ನಗರಸಭೆ ಸದಸ್ಯರಾದ ನಾಸೀರ್ ಹುಸೇನ ಕುಂಡಾಲೆ, ಮುಹಮ್ಮದ್ ಗೌಸ್, ಶರೀಫ್ ಅಹ್ಮದ್, ಖಮರುದ್ದಿನ್ ನಾರಾಯಣಪೇಟ, ರಾಜ ಮುಹಮ್ಮದ್, ಇಶಿತಿಯಾಕ್ ಹುಸೇನ ಸವಾರ, ಲಿಯಾಖತ್ ಹುಸೇನ ಉಸ್ತಾದ, ಮುಹಮ್ಮದ್ ಮೌಲಾಲಿ ಸೌದಾಗರ, ಮುಹಮ್ಮದ್ ಆರೀಫ್, ಇಸ್ಮಾಯಿಲ್, ಅಬೀದ್ ಹುಸೇನ ಪಗಡಿ, ಹಾಫೀಸ್ ಖಲೀಲುಲ್ಲಾ, ರಫೀಕ್ ಹವಾಲ್ದಾರ, ಮಶಾಕಸಾಬ ಒಂಟಿ ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News