×
Ad

ಯಾದಗಿರಿ | ವಡಗೇರಾ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೇಗೇರಿಸಲಾಗುವುದು : ಶಾಸಕ ಚೆನ್ನಾರೆಡ್ಡಿ ಪಾಟೀಲ್‌

Update: 2025-11-22 19:33 IST

ಯಾದಗಿರಿ: ದೋರನಹಳ್ಳಿ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಆಗುವ ಸಂದರ್ಭದಲ್ಲಿಯೇ ವಡಗೇರಾ ಪಟ್ಟಣ ಪಂಚಾಯಿತಿ ಆಗುತ್ತಿತ್ತು. ಕೆಲವು ದಾಖಲೆಗಳ ವಿಳಂಬದಿಂದ ವಡಗೇರಾ ಆ ಪಟ್ಟಿಯಿಂದ ಹಿಂದೆ ಬಿದ್ದಿದೆ. ಮುಂಬರುವ ಕ್ಯಾಬಿನೆಟ್‌ನಲ್ಲಿ ವಡಗೇರಾ ಪಂಚಾಯಿತಿಯನ್ನು ಮೇಲ್ದರ್ಜೇಗೇರಿಸಲಾಗುವುದು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರ್‌ ಭರವಸೆ ನೀಡಿದರು.

ವಡಗೇರಾ ಪಟ್ಟಣ ಪಂಚಾಯಿತಿ ಹೋರಾಟ ಸಮಿತಿ ಸದಸ್ಯರು ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಶಾಸಕ ಚನ್ನಾರಡ್ಡಿ ಪಾಟೀಲ್‌, ಮುಂಬರುವ ಕ್ಯಾಬಿನೆಟ್‌ನಲ್ಲಿ ವಡಗೇರಾ ಗ್ರಾಮ ಪಂಚಾಯತಿಯನ್ನು ಮೇಲ್ದರ್ಜೇಗೇರಿಸಿ ಪಟ್ಟಣ ಪಂಚಾಯಿತಿ ಮಾಡಿಕೊಡುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ. ಹಾಗಾಗಿ ನಾನು ಈ ಭರವಸೆ ನೀಡುತ್ತಿದ್ದು ಜನರು ಸಹಕರಿಸಬೇಕು ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ವಡಗೇರಾ ಪಟ್ಟಣ ಪಂಚಾಯತಿ ಹೋರಾಟ ಸಮಿತಿ ಸದಸ್ಯರು, ವಡಗೇರಾ ತಾಲೂಕು ಕೇಂದ್ರವಾಗಿ ಸುಮಾರು ಎಂಟು ವರ್ಷಗಳು ಕಳೆದರೂ ವಡಗೇರಾ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡದೆ ಸರಕಾರ ಕೈಬಿಟ್ಟಿದ್ದು, ಕೂಡಲೇ ಪಟ್ಟಣ ಪಂಚಾಯತಿ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.  

ಈ ಸಂದರ್ಭದಲ್ಲಿ ಸಿದ್ದಣ್ಣಗೌಡ ಕಾಡಂನೋರ, ಸಂಗುಗೌಡ ಮಾಲಿ ಪಾಟೀಲ್, ಅಶೋಕ ಮುಸ್ತಾಜೀರ, ಬಸವರಾಜ ನೀಲಹಳ್ಳಿ , ಯಂಕಣ್ಣ ಬಸಂತಪೂರ, ಶರಣಪ್ಪ ಪಡಿಶೆಟ್ಟಿ , ಶಿವಕುಮಾರ ಕೊಂಕಲ್, ಮಲ್ಲಣ್ಣ ನೀಲಹಳ್ಳಿ , ಫಕೀರ್‌ ಅಹಮ್ಮದ್‌, ಅಬ್ದುಲ್ ಚಿಗಾನೂರ, ಭೀಮಣ್ಣ ಬುದಿನಾಳ, ಸಾಬಯ್ಯ ಗುತ್ತೇದಾರ, ಹೊನ್ನಪ್ಪ ಕಡೆಚೂರ, ಮರೆಪ್ಪ, ಶರಣು ಕುರಿ ಮತ್ತಿತರರು ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News