ಯಾದಗಿರಿ| ಚಿರತೆಯ ದಾಳಿಗೆ ಆಕಳು, ಮೇಕೆ ಬಲಿ : ಆತಂಕದಲ್ಲಿ ಗ್ರಾಮಸ್ಥರು
Update: 2025-11-30 20:24 IST
ಯಾದಗಿರಿ: ತಾಲೂಕಿನ ಅಲ್ಲಿಪೂರದಲ್ಲಿ ಚಿರತೆ ದಾಳಿಗೆ ಶರಣಪ್ಪ ತಂ.ಸಾಬಣ್ಣ ಬಡಿಗೇರ ಅವರಿಗೆ ಸೇರಿದ ಆಕಳು ಮತ್ತು ಮೇಕೆಗಳು ಬಲಿಯಾಗಿದೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ, ಮಸಕನಹಳ್ಳಿ ಮತ್ತು ಮುಂಡರಗಿಯಲ್ಲೂ ಇದೇ ರೀತಿಯ ಘಟನೆಗಳು ನಡೆದಿದ್ದರೂ ಅರಣ್ಯ ಇಲಾಖೆ ಈ ಕಡೆಗೆ ಗಮನ ಹರಿಸುತ್ತಿಲ್ಲ. ಆದ್ದರಿಂದ ಡಿ.3ರಂದು ಯಾದಗಿರಿ ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿಗೆ ರೈತರ ನೇತೃತ್ವದಲ್ಲಿ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಈ ಬಗ್ಗೆ ಗ್ರಾಮಸ್ಥರು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಯಾದಗಿರಿ–ಕಲಬುರಗಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಪವನ, ವಿಜಯ, ರಾಜು, ಚಂದ್ರು, ಕಾಶಪ್ಪ ಬಡಿಗೇರ, ಹಣಮಂತ ಹುಲೇರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.