ಯಾದಗಿರಿ | ರುದ್ರಭೂಮಿಗೆ ಅಗತ್ಯ ನೆರವು : ಶಾಸಕ ಚೆನ್ನಾರಡ್ಡಿ ಪಾಟೀಲ್ ಭರವಸೆ
ಯಾದಗಿರಿ : ರುದ್ರಭೂಮಿ ಸ್ಥಳಗಳು ಕೂಡ ಸ್ವಚ್ಛತೆ, ಬೆಳಕಿನ ಮತ್ತು ನೀರಿನ ವ್ಯವಸ್ಥೆಯಿಂದ ಕೂಡಿರಬೇಕು, ಇದೇನು ಸತ್ತವರನ್ನು ಹೂಲುವ ಜಾಗ ಎಂದು ನಿರ್ಲಕ್ಷಿಸಬಾರದೆಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ಹೇಳಿದರು.
ಇಲ್ಲಿನ ಬಸವೇಶ್ವರ ಗಂಜ್ ಪ್ರದೇಶದಲ್ಲಿರುವ ವೀರಶೈವ ಲಿಂಗಾಯತ ಸಮಾಜದ ರುದ್ರಭೂಮಿ ಪ್ರದೇಶದಲ್ಲಿ 5 ಲಕ್ಷ ರೂ. ವೆಚ್ಚದ ಸೋಲಾರ ವಿದ್ಯುತ್ ಬೆಳಕಿನ ಕಾಮಗಾರಿ ಹಾಗೂ ವಿವಿಧ ಮೂಲಭೂತ ಕೆಲಸಗಳಿಗೆ ಭೂಮಿ ಪೂಜೆ ಮಾಡಿ ಮಾತನಾಡಿದರು.
ಇಲ್ಲಿ ಇನ್ನೂ ಏನೇನು ಬೇಕು ಎಂದು ಪಟ್ಟಿ ಮಾಡಿಕೊಟ್ಟರೇ ಅವುಗಳ ವ್ಯವಸ್ಥೆ ಮಾಡಲಾಗುವುದೆಂದರು.
ಸಮಾಜದ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೊಸಂಬಿ, ಯುವ ಘಟಕದ ಜಿಲ್ಲಾಧ್ಯಕ್ಷ ಸುರೇಶ ಜಾಕಾ,ತಾಲೂಕಾಧ್ಯಕ್ಷ ರಾಜಶೇಖರ ಚಾಮನಳ್ಳಿ ಮುಖಂಡರಾದ ಶರಣಗೌಡ ಮಾಲಿಪಾಟೀಲ್, ಶರಣಪ್ಪ ಜಾಕಾ, ವಿಶ್ವನಾಥ ಕಾಜಗಾರ, ವೀರೇಶ ನಿಲೋಗಿ, ಜಗದೀಶ ಜಾಕಾ, ಸತೀಶ ಅಂಗಡಿ , ಸುಭಾಷ ದೇವದುರ್ಗ, ಅಂಬರೀಶ ಜಾಕಾ, ಸುರೇಶ ರಾಯಚೂರು, ಮಂಜುನಾಥ ವಟಿ, ನಾಗರಾಜ್ ಲದ್ದಿ, ವಿನಯ, ವಿಶ್ವನಾಥ ಕೋರಿ, ಭರತಕುಮಾರ, ವಿಶ್ವ ಗಣಪುರ, ಸಿದ್ದು ಅತ್ತುತಿ, ಸಂದೀಪ್ ಕಡೆಚೂರು ಸೇರಿದಂತೆಯೇ ಇತರರಿದ್ದರು.