×
Ad

ಯಾದಗಿರಿ | ತೃತೀಯ ಲಿಂಗಿ ಸುಕನ್ಯಾ ಅಪಹರಣ, ಹಲ್ಲೆ ಪ್ರಕರಣ : ಪಾರದರ್ಶಕ ತನಿಖೆಗೆ ಒತ್ತಾಯ

Update: 2025-11-19 22:13 IST

ಯಾದಗಿರಿ : ಬೆಂಗಳೂರಿನ ಕೃಷ್ಣರಾಜಪುರಂನಿಂದ ತೃತೀಯ ಲಿಂಗಿ ಸುಕನ್ಯಾ ಅವರನ್ನು ಅಪಹರಿಸಿ ಕ್ರೂರವಾಗಿ ಹಲ್ಲೆಗೈದು ಹಿಂಸೆ ನೀಡಿರುವ ಕುರಿತು ಪ್ರಕರಣ ದಾಖಲಾಗಿದೆ. ಈ ಘಟನೆಯ ಕುರಿತು ಪಾರದರ್ಶಕವಾಗಿ ತನಿಖೆ ನಡೆಸಿ ಎಲ್ಲಾ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ ಅಧ್ಯಕ್ಷೆ ವೈಶಾಲಿ ಎನ್.ಬ್ಯಾಳಿ, ಸದಸ್ಯರಾದ ಸಹನಾ ಹಾಗೂ ದೀಪಾ ಒತ್ತಾಯಿಸಿದರು.

ಜಿಲ್ಲಾ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೈಶಾಲಿ ಎನ್.ಬ್ಯಾಳಿ, ಹಲ್ಲೆಗೊಳಗಾಗಿರುವ ಸುಕನ್ಯಾ ಸುರಕ್ಷತೆಯನ್ನು ಖಾತ್ರಿಪಡಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಲಿಂಗತ್ವ ಅಲ್ಪಸಂಖ್ಯಾತರಿಗೆ ಸರಕಾರಿ ಉದ್ಯೋಗಗಳಲ್ಲಿ ವಿಶೇಷ ನೇಮಕಾತಿ, ಕೌಶಲ್ಯಾಭಿವೃದ್ಧಿ ಮತ್ತು ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.  

ಈ ಹಿಂದೆ ಕಲಬುರಗಿ, ಮೈಸೂರು, ವಿಜಯಪುರ, ದೊಡ್ಡಬಳ್ಳಾಪುರ ಸೇರಿದಂತೆ ಇತರ ಜಿಲ್ಲೆಗಳಲ್ಲಿಯೂ ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ಅಮಾನವೀಯ ಹಲ್ಲೆಗಳು ನಡೆದಿದೆ. ಹಿಂಸೆ ಹಾಗೂ ಅನ್ಯಾಯದ ವಿರುದ್ಧ ಧ್ವನಿಯೆತ್ತಲು ಎಲ್ಲಾ ಲಿಂಗತ್ವ ಅಲ್ಪಸಂಖ್ಯಾತರು ಮುಂದಾಗಬೇಕಿದೆ ಎಂದರು.

ಈ ವೇಳೆ ತೃತೀಯ ಲಿಂಗಿ ಸಪ್ನಾ, ಮಹಿಳಾ ಹೋರಾಟಗಾರ್ತಿ ಭಾಗ್ಯ, ದಲಿತ ಮುಖಂಡರಾದ ಮರೆಪ್ಪ ಚಟ್ಟೇರಕರ್, ಸೈದಪ್ಪ, ನಿಂಗಪ್ಪ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News