×
Ad

ಯಾದಗಿರಿ |ಗಣೇಶ ಹಬ್ಬ, ಈದ್ ಮಿಲಾದ್ ಪ್ರಯುಕ್ತ ಶಾಂತಿ ಸಭೆ

Update: 2025-08-22 21:21 IST

ಯಾದಗಿರಿ: ಜಿಲ್ಲೆಯಲ್ಲಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಸೌರ್ಹಾದತೆಯಿಂದ ಆಚರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಥ್ವಿಕ್ ಶಂಕರ್ ಹೇಳಿದ್ದಾರೆ.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿಆಯೋಜಿಸಿದ್ದ ವಿವಿಧ ಸಮುದಾಯಗಳ ಮುಖಂಡರ, ಸಂಘ, ಸಂಸ್ಥೆಗಳ ಪದಾಧಿಕಾರಿಗಳ ಮತ್ತು ಗಣೇಶ ಉತ್ಸವ ಸಮಿತಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಎಸ್ಪಿ ಪ್ರಥ್ವಿಕ್ ಶಂಕರ್, ಈ ಎರಡು ಹಬ್ಬಗಳು ಸುರಕ್ಷತೆಯಿಂದ ಮತ್ತು ಜಾಗರೂಕತೆಯಿಂದ ಆಚರಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಂಡು ಧ್ವನಿವರ್ಧಕ ಬಳಸಬೇಕು. ಕರೆಂಟ್ ನೊಂದಿಗೆ ಚೆಲ್ಲಾಟ ಆಡುವುದು, ಗಣೇಶನ ವಿಗ್ರಹಗಳನ್ನು ವಿಸರ್ಜಿಸುವಾಗ ಈಜಾಡುವುದು ಸೇರಿದಂತೆಯೇ ನಿಯಮಗಳನ್ನು‌ ಮೀರಿ ಆಚರಣೆಗೆ ಅವಕಾಶವಿಲ್ಲ. ಇದನ್ನು ಮೀರಿದರೆ ಸಂಬಂಧಪಟ್ಟ ಸಮಿತಿಯವರ ಮೇಲೆಯೇ ದೂರು ದಾಖಲಿಸಿ ಮುಂದೆ ಆಚರಣೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಎಸ್ಪಿ ಪ್ರಥ್ವಿಕ್ ಶಂಕರ್ ಹೇಳಿದ್ದಾರೆ.  

ಸಭೆಯಲ್ಲಿ ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ, ಡಿವೈಎಸ್ ಪಿ ಸುರೇಶ, ಸಿಪಿಐ ಸುನೀಲಕುಮಾರ, ಪಿಎಸ್ಐ ವೆಂಕಣ್ಣಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News