×
Ad

ಯಾದಗಿರಿ|ಶಾಸಕ ರಾಜಾ ವೇಣುಗೋಪಾಲ್‌ ವಿರುದ್ಧ ಅವಹೇಳನಾಕಾರಿ ಪೋಸ್ಟ್ ಹಾಕಿರುವ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Update: 2025-11-29 19:41 IST

ಸುರಪುರ: ಶಾಸಕ ರಾಜಾ ವೇಣುಗೋಪಾಲ್‌ ನಾಯಕ್‌ ವಿರುದ್ಧ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡುತ್ತಿದ್ದು ಕೂಡಲೇ ಅವರನ್ನು ಬಂಧಿಸಿ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿ ಸಾಮೂಹಿಕ ಸಂಘಟನೆಗಳ ವೇದಿಕೆ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಶಾಸಕರ ಬೆಂಬಲಿಗರು ನಗರದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ನ.26ರಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾಲಾರ್ಪಣೆಗೆ ಹೋದ ಸಂದರ್ಭದಲ್ಲಿ ಕೆಲವರು ತಹಶೀಲ್ದಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಕಾರ್ಯಕ್ರಮಕ್ಕೆ ಅಡಚಣೆ ಉಂಟು ಮಾಡಲಾಗಿತ್ತು. ಆ ರೀತಿ ಮಾಡುವುದು ತಪ್ಪು ಎಂದು ಶಾಸಕ ರಾಜಾ ವೇಣುಗೋಪಾಲ್‌ ನಾಯಕ್‌ ಬುದ್ಧಿವಾದ ಹೇಳಿದ್ದರು. ಆದರೆ ಇದೇ ಕಾರಣಕ್ಕೆ  ಶಾಸಕರಿಗೂ ಆ ಘಟನೆಗೂ ಸಂಬಂಧ ಇಲ್ಲದಿದ್ದರೂ ಶಾಸಕರ ವಿರುದ್ಧ ಅವಮಾನಕರ ರೀತಿ ಪದ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡಲಾಗಿದೆ. ಇದಲ್ಲದೆ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ಕೂಡ ಪೋಸ್ಟ್ ಹಾಕಲಾಗಿದೆ. ಆದ್ದರಿಂದ ಅವಹೇಳನಾಕಾರಿ ಪೋಸ್ಟ್‌ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.  

ಈ ಸಂದರ್ಭದಲ್ಲಿ ಮುಖಂಡರುಗಳಾದ ರಮೇಶ ದೊರೆ ಆಲ್ದಾಳ, ಭೀಮನಗೌಡ ಲಕ್ಷ್ಮೀ, ಮಾರ್ಥಂಡಪ್ಪ ದೇವರಗೋನಾಲ, ಹಣಮಂತ್ರಾಯ ಮಕಾಶಿ, ಭೀಮು ನಾಯಕ ಮಲ್ಲಿಭಾವಿ, ಗೌಡಪ್ಪ ಬಿಚ್ಚಗತ್ತಿಕೇರ, ನಾಗರಾಜ ಪ್ಯಾಪ್ಲಿ, ವೆಂಕಟೇಶ ಪ್ಯಾಪ್ಲಿ, ಭಾಗನಾಥ ಗುತ್ತೇದಾರ್, ವಿರುಪಾಕ್ಷಿ ಸತ್ಯಂಪೇಟೆ, ಶಕೀಲ ಅಮದ್ ಖುರೇಶಿ, ನಾಸಿರ್ ಕುಂಡಾಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News