×
Ad

ಡಿವೈಎಫ್‌ಐ: ಮಂಗಳೂರು ನಗರ ಮಟ್ಟದ ಸಮಾವೇಶ

Update: 2025-08-13 18:03 IST

ಮಂಗಳೂರು, ಆ.13: ತುಳುನಾಡ ಅಭಿವೃದ್ಧಿಡ್ ತುಳುವಪ್ಪೆಜೋಕ್ಲೆಗ್ ಮಲ್ಲಪಾಲ್, ಉದ್ಯೋಗ ಸೃಷ್ಟಿಸಿ, ನಿರುದ್ಯೋಗದಿಂದ ರಕ್ಷಿಸಿ ಎಂಬ ಘೋಷಣೆಯೊಂದಿಗೆ ಡಿವೈಎಫ್‌ಐ ಮಂಗಳೂರು ನಗರ ಮಟ್ಟದ ಯುವಜನ ಸಮಾವೇಶವು ಮಂಗಳವಾರ ನಗರದ ಬಲ್ಮಠದ ಸಹೋದಯ ಸಭಾಂಗಣ ನಡೆಯಿತು.

ಡಿವೈಎಫ್‌ಐ ಮಾಜಿ ನಾಯಕ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ದೇಶದಲ್ಲಿ ಶೇ.50ಕ್ಕೂ ಹೆಚ್ಚು ಯುವಜನರು ಇದ್ದಾರೆ. ಆದರೆ ಈ ಯುವಜನರು ನಿರುದ್ಯೋಗದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಯುವಜನರ ನಿಜವಾದ ಸಮಸ್ಯೆಯನ್ನು ಬಗೆಹರಿಸುವ ಬದಲು ಧರ್ಮದ ಹೆಸರಿನಲ್ಲಿ ಯುವಜನರನ್ನು ಬಲಿಪಶು ಮಾಡಲಾಗು ತ್ತಿದೆ. ಆದರೆ ಡಿವೈಎಫ್‌ಐ ಸಂಘಟನೆಯು ಭಾಷೆ, ಲಿಂಗ, ಧರ್ಮ ಯಾವುದೇ ಭೇದವಿಲ್ಲದೆ ಎಲ್ಲರನ್ನೂ ಒಟ್ಟು ಸೇರಿಸುವ ಕೆಲಸ ಮಾಡುತ್ತಿದೆ. ದ.ಕ ಜಿಲ್ಲೆಯ ಎಲ್ಲ ಸಮಸ್ಯೆಗಳಿಗೆ ಎದುರಾಗಿ ಯುವಜನರನ್ನು ಸಂಘಟಿಸುವ ಕೆಲಸ ಡಿವೈಎಫ್‌ಐ ಮಾಡುತ್ತಿದೆ. ಜಿಲ್ಲೆಯ ಅಭಿವೃದ್ದಿಯಿಂದ ಸೃಷ್ಡಿಯಾಗುವ ಉದ್ಯೋಗಗಳಲ್ಲಿ ಸ್ಥಳೀಯ ಯುವಜನರಿಗೆ ಹೆಚ್ಚಿನ ಆದ್ಯತೆ ಒದಗಿದರೆ ಅವರ ಬದುಕು ಹಸನಾಗಲಿದೆ ಎಂದರು.

ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ ಡಿವೈಎಫ್‌ಐ ಸಂಘಟನೆಗೆ ಹೋರಾಟದ ಇತಿಹಾಸ ಇದೆ. ಸೌಹಾರ್ದ ಯುವ ಸಮ್ಮಿಲನ ಕಾರ್ಯಕ್ರಮದಿಂದ ಯುವಜನರನ್ನು ಒಟ್ಟುಗೂಡಿಸಲು ಸಾಧ್ಯ ವಾಗಿದೆ. ಶಾಂತಿ ಸೌಹಾರ್ದ ನೆಲೆಯಾದರೆ ಮಂಗಳೂರು ಬೆಳೆಯುತ್ತದೆ. ಅದರಂತೆ ಉದ್ಯೋಗ ಸೃಷ್ಟಿ ಆಗುತ್ತದೆ, ಬಡತನ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರತಿಸಿಧಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಕೇಂದ್ರ ಸರಕಾರ ಉದ್ಯೋಗ ಸೃಷ್ಟಿಯ ಹೆಸರಲ್ಲಿ ಇಂಟರ್ನ್‌ಶಿಪ್‌ನ್ನು ಉದ್ಯೋಗ ಎಂದು ಬಿಂಬಿಸಲಾಗಿದೆ. ಇಂಟರ್ನ್‌ಶಿಪ್ ಉದ್ಯೋಗ ಕ್ಕಿಂತಲೂ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಪಡಿಸುವ ಹುನ್ನಾರ ಅಡಗಿದೆ. ದ.ಕ ಜಿಲ್ಲೆಯಲ್ಲಿ ವರ್ಷಕ್ಕೆ 1,12,694 ವೃತ್ತಿಪರ ಶಿಕ್ಷಣ ಪಡೆದು ಸರ್ಟಿಫಿಕೆಟ್ ಹಿಡಿದು ಹೊರಬರುತ್ತಿರುವ ವಿದ್ಯಾರ್ಥಿಗಳಿಗೆ ಅರ್ಹ ಉದ್ಯೋಗ ಗಳು ಸೃಷ್ಟಿಯಾಗುತ್ತಿಲ್ಲ. ಜಿಲ್ಲೆಯೊಂದರಲ್ಲೆ ಸರಕಾರದ ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಬಿದ್ದಿವೆ. ರಾಜ್ಯ, ಕೇಂದ್ರಕ್ಕೆ ಹೋಲಿಸಿದರೆ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸಗಳಿಗೆ ಸರಕಾರಗಳು ಮುಂದಾಗುತ್ತಿಲ್ಲ. ಬದಲಾಗಿ ಗುತ್ತಿಗೆಯಾ ಆಧಾರದ, ಅರೆಕಾಲಿಕ ಉದ್ಯೋಗಗಳಲ್ಲಿ ದುಡಿಸಲಾಗುತ್ತಿದ್ದೆ ಎಂದರು.

ಅನಿ ಮಂಗಳೂರು ಮಾತನಾಡಿ ಯುವತಿಯರು, ಯುವಕರು ಮಾತ್ರವಲ್ಲ ಮಂಗಳಮುಖಿಯರಾದ ನಮಗೂ ಕೆಲಸ ಬೇಕು. ಮಂಗಳಮುಖಿಯರ ಶಿಕ್ಷಣ ಮತ್ತು ಉದ್ಯೋಗಕ್ಕೆ ಡಿವೈಎಫ್‌ಐ ಬೆಂಬಲಿಸುತ್ತಿರುವು ಖುಷಿ ತಂದಿದೆ ಎಂದರು.

ಮಂಗಳೂರು ನಗರ ಅಧ್ಯಕ್ಷ ಜಗದೀಶ್ ಬಜಾಲ್ ಅಧ್ಯಕ್ಷತೆ ವಹಿಸಿದ್ದರು. ನವೀನ್ ಕೊಂಚಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಮುಖಂಡರಾದ ಮಾಧುರಿ ಬೋಳಾರ್, ನಿತಿನ್ ಕುತ್ತಾರ್, ತಯ್ಯೂಬ್ ಬೆಂಗ್ರೆ ಉಪಸ್ಥಿತರಿದ್ದರು. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಯುವಜನ ಜಾಥಾದ ಬೇಡಿಕೆಗಳಿರುವ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದರು.

*ಸಮಾವೇಶದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ನವೀನ್ ಕೊಂಚಾಡಿ, ಕಾರ್ಯದರ್ಶಿ ಯಾಗಿ ತಯ್ಯೂಬ್ ಬೆಂಗರೆ, ಕೋಶಾಧಿಕಾರಿಯಾಗಿ, ಅಡ್ವಕೇಟ್ ಚರಣ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಗದೀಶ್ ಬಜಾಲ್, ಕ್ರೀಡಾ ಕಾರ್ಯದರ್ಶಿಯಾಗಿ ಪುನೀತ್ ಉರ್ವಸ್ಟೋರ್ ಸಹಿತ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News