×
Ad

ಮೀಂ ಕವಿಗೋಷ್ಠಿಗೆ ಕವಿತೆ ಆಹ್ವಾನ

Update: 2025-08-13 18:12 IST

ಬೆಂಗಳೂರು : ಮರ್ಕಝ್ ನಾಲೆಜ್ ಸಿಟಿ ಅಧೀನದ ವಿರಾಸ್ ಕನ್ನಡ ವಿದ್ಯಾರ್ಥಿಗಳ ಸಂಘಟನೆಯು ಆಯೋಜಿಸುವ ’ಮೀಮ್’ ಮೂರನೇ ಆವೃತ್ತಿಯ ಭಾಗವಾಗಿ ನಡೆಯಲಿರುವ ಕವಿಗೋಷ್ಠಿಗೆ ಕವಿತೆಗಳನ್ನು ಆಹ್ವಾನಿಸಲಾಗಿದೆ. ಪೈಗಂಬರ್ ಮುಹಮ್ಮದ್ ಅವರ ಕುರಿತಾಗಿ ಕವಿತೆ ರಚಿಸಿರಬೇಕು ಮತ್ತು ಸ್ವರಚಿತ ಹಾಗೂ ಅಪ್ರಕಟಿತವಾಗಿರಬೇಕು.

21ರಂದು ಬೆಂಗಳೂರಿನ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಯ್ದ ಕವಿಗಳಿಗೆ ಕವಿತೆಗಳನ್ನು ವಾಚಿಸಲು ಮತ್ತು ಸಾಹಿತ್ಯ ಕಾರ್ಯಗಾರದಲ್ಲಿ ಭಾಗವಹಿಸಲು ಅವಕಾಶವಿದೆ.

ಸೆಪ್ಟೆಂಬರ್ 1ರೊಳಗೆ ಕವಿತೆಗಳನ್ನು meemkannadagmail.com ಗೆ ಕಳುಹಿಸಬಹುದು. ಮಾಹಿತಿಗೆ ಮೊ.ಸಂ: 7902936986ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News