×
Ad

ಸೆಪ್ಟಂಬರ್‌ನಲ್ಲಿ ಮೇಲ್ತೆನೆಯ ದಶಮಾನೋತ್ಸವ ಕಾರ್ಯಕ್ರಮ

Update: 2025-08-13 18:17 IST

ದೇರಳಕಟ್ಟೆ: ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಬೆಳವಣಿಗೆಯ ನಿಟ್ಟಿನಲ್ಲಿ ಉಳ್ಳಾಲ ತಾಲೂಕು ಮಟ್ಟದಲ್ಲಿ ಕಳೆದ 10 ವರ್ಷದಿಂದ ಕಾರ್ಯಾಚರಿಸುತ್ತಿರುವ ಬ್ಯಾರಿ ಎಲ್ತ್‌ಕಾರ್ ಪಿನೆ ಕಲಾವಿದಮಾರೊ ಕೂಟ (ಮೇಲ್ತೆನೆ)ದ ದಶಮಾನೋತ್ಸವ ಕಾರ್ಯಕ್ರಮವು ದೇರಳಕಟ್ಟೆಯಲ್ಲಿ ಸೆಪ್ಟಂಬರ್‌ನಲ್ಲಿ ನಡೆಯಲಿದೆ.

ದಿನವಿಡೀ ನಡೆಯುವ ಈ ಕಾರ್ಯಕ್ರಮದಲ್ಲಿ ಚರ್ಚಾಗೋಷ್ಠಿ, ಕವಿಗೋಷ್ಠಿ, ವಿವಿಧ ಸ್ಪರ್ಧೆಗಳು, ಬ್ಯಾರಿ ಹಾಡು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ, ಮೇಲ್ತೆನೆ ಪ್ರಶಸ್ತಿ, ಕವನ ಸಂಕಲನ ಮತ್ತು ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ ಎಂದು ಮೇಲ್ತೆನೆಯ ಅಧ್ಯಕ್ಷ ವಿ. ಇಬ್ರಾಹೀಂ ನಡುಪದವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News