ಬಜಾಲ್ ಪಡ್ಪು: ಎಸ್ಕೆಎಸ್ಸೆಸ್ಸೆಫ್‌ನಿಂದ ರಕ್ತದಾನ ಶಿಬಿರ
ಮಂಗಳೂರು : ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಆಡಳಿತ ಕಮಿಟಿ, ಎಸ್‌ವೈಎಸ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಇದರ ಸಂಯುಕ್ತಾಶ್ರಯದಲ್ಲಿ ಸಮಸ್ತ 100ನೇ ವಾರ್ಷಿಕ ಪ್ರಚಾರಾರ್ಥ ಮತ್ತು ಮರ್ಹೂಮ್ ಅಬ್ದುಲ್ ರಹ್ಮಾನ್ ಕೊಳ್ತಮಜಲ್ ಅವರ ಸ್ಮರಣಾರ್ಥ ಎಸ್ಕೆಎಸ್ಸೆಸ್ಸೆಫ್ ವಿಖಾಯ ರಕ್ತದಾನಿ ಬಳಗ ಹಾಗೂ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ ಬಜಾಲ್ ಪಡ್ಪು ಹಿದಾಯತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ರಕ್ತದಾನ ಶಿಬಿರ ರವಿವಾರ ನಡೆಯಿತು.
ಮಸೀದಿಯ ಖತೀಬ್ ಮುಹಮ್ಮದ್ ರಫೀಕ್ ಯಮಾನಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ದ.ಕ.ವೆಸ್ಟ್ ಜಿಲ್ಲಾ ಸಮಿತಿಯ ಸದಸ್ಯ, ಹಿದಾಯತುಲ್ ಇಸ್ಲಾಂ ಮದ್ರಸದ ಸದರ್‌ಮುಅಲ್ಲಿಂ ಮುಹಮ್ಮದ್ ಇರ್ಫಾನ್ ಅಸ್ಲಮಿ ದಿಕ್ಸೂಚಿ ಭಾಷಣ ಮಾಡಿದರು. ಮಸೀದಿಯ ಅಧ್ಯಕ್ಷ ಅಬ್ದುಲ್ ಬಶೀರ್ ಹಟ್ಟಿಬಳಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಂಕನಾಡಿ ಠಾಣೆಯ ನಿರೀಕ್ಷಕ ಶಿವಕುಮಾರ್ ಕೆ, ಎಸ್ಕೆಎಸ್ಸೆಸ್ಸೆಫ್ ದ.ಕ.ವೆಸ್ಟ್ ಜಿಲ್ಲಾ ಸಮಿತಿ ಬ್ಲಡ್ ಉಸ್ತುವಾರಿ ನಝೀರ್ ವಳಚ್ಚಿಲ್, ಎಸ್‌ವೈಎಸ್ ಅಧ್ಯಕ್ಷ ಅನ್ವರ್ ಅಬೂಬಕ್ಕರ್, ಕಾರ್ಯದರ್ಶಿ ಅಬ್ದುಲ್ ರಝಾಕ್, ಇಝ್ಝಾ ಬಜಾಲ್, ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ಅಧ್ಯಕ್ಷ ಜಲೀಲ್ ಕುದ್ರೋಳಿ, ಕಾರ್ಯದರ್ಶಿ ನಿಯಾಝ್ ಫೈಝಿ, ಮಂಗಳೂರು ವಲಯ ಸಹಚಾರಿ ಚೇರ್ಮ್ಯಾನ್ ಇಮ್ರಾನ್ ಮಾರಿಪಳ್ಳ, ಎಸ್ಕೆಎಸ್ಸೆಸ್ಸೆಫ್ ಕಣ್ಣೂರ್ ಕ್ಲಸ್ಟರ್ ಅಧ್ಯಕ್ಷ ಮುನೀರ್ ಅಬ್ದುಲ್ ಖಾದರ್, ಎಸ್ಕೆಎಸ್ಸೆಸ್ಸೆಫ್ ಬಜಾಲ್ ಪಡ್ಪು ಶಾಖಾ ಅಧ್ಯಕ್ಷ ಮುಸ್ತಫ, ಕೋಶಾಧಿಕಾರಿ ಉನೈಸ್, ವರ್ಕಿಂಗ್ ಕಾರ್ಯದರ್ಶಿ ಆಸಿಫ್,ಉಪಾಧ್ಯಕ್ಷ ಮುಕ್ತಾರ್, ರಾಝಿಮ್, ಅರ್ಶದ್ ಉಪಸ್ಥಿತರಿದ್ದರು.
ಎಸ್ಕೆಎಸ್ಸೆಸ್ಸೆಫ್ ಬಜಾಲ್ ಪಡ್ಪು ಶಾಖಾ ಪ್ರಧಾನ ಕಾರ್ಯದರ್ಶಿ ನಾಝಿಕ್ ಬಜಾಲ್ ಸ್ವಾಗತಿಸಿದರು.