×
Ad

ಅಕ್ಷೇಪರ್ಹ ಪದ ಬಳಸಿದ ಆರೋಪ: ರಾಕೇಶ್ ಶೆಟ್ಟಿ ವಿರುದ್ಧ ಪುತ್ತೂರು ನಗರ ಠಾಣೆಗೆ ದೂರು

Update: 2025-08-22 23:33 IST

ಪುತ್ತೂರು: ಸೌಜನ್ಯ ಹೋರಾಟದ ಮೂಲಕ ಗುರುತಿಸಿಕೊಂಡವರಿಗೆ ಅಸವಿಂಧಾನಿಕ ಪದ ಬಳಕೆ ಮಾಡಿದ ಬಗ್ಗೆ ಬಜರಂಗದಳದ ಮಾಜಿ ಮುಖಂಡ ಧನ್ಯ ಕುಮಾರ್ ಬೆಳಂದೂರು ಎಂಬವರು ಶುಕ್ರವಾರ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

ಕಾರ್ಕಳ ತಾಲೂಕಿನ ಅಜೆಕಾರು ಮೂಲದ ರಾಕೇಶ್ ಶೆಟ್ಟಿ ಎಂಬವರು ಸ್ಥಳೀಯ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಅಕ್ಷೇಪರ್ಹ ಪದ ಬಳಸಿ ಮಾತನಾಡಿರುವುದಾಗಿ ಆರೋಪಿಸಲಾಗಿದ್ದು, ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವ‌ರ್ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಕೇಶ್ ಶೆಟ್ಟಿ ಅಸವಿಂಧಾನಿಕ ಪದಗಳಿಂದ ಅವಾಚ್ಯ ಶಬ್ದ ಬಳಸಿ ಕೆಟ್ಟ ರೀತಿಯಲ್ಲಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಘಟನೆಯೂ ಜ ಸಾಮಾಜಿಕ ನ್ಯಾಯದಡಿಯಲ್ಲಿರುವ ಲಕ್ಷಾಂತರ ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿದೆ. ಸಮಾದ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟು ಶಾಂತಿ ಭಂಗಕ್ಕೆ ಹಾಗೂ ಸ್ವಾಸ್ಥ್ಯ ಕದಡಲು ಅವಕಾಶ ಮಾಡಿಕೊಟ್ಟಿದೆ. ತಕ್ಷಣ ಕಾನೂನು ಕ್ರಮ ಕೈಗೊಂಡು ಕಠಿಣ ಕ್ರಮ ವಿಧಿಸಬೇಕೆಂದು ದೂರಿನಲ್ಲಿ ವಿನಂತಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಧನ್ಯಕುಮಾರ್ ಜೊತೆಗೆ ದಿನೇಶ್ ಜೈನ್, ಹರಿಪ್ರಸಾದ್‌ ಶೆಟ್ಟಿ ನೆಲ್ಲಿಕಟ್ಟೆ. ಪುರುಷೋತ್ತಮ ಕೋಲ್ಪೆ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News