×
Ad

ಜಮೀಯ್ಯತುಲ್ ಫಲಾಹ್ ಕಾರ್ಕಳ ಘಟಕ: ಪದಗ್ರಹಣ ಕಾರ್ಯಕ್ರಮ

Update: 2025-10-17 18:30 IST

ಕಾರ್ಕಳ : ಜಮೀಯತುಲ್ ಫಲಾಹ್ ಕಾರ್ಕಳ ಘಟಕದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಸಾಲ್ಮರದ ಜಾಮಿಯ ಮಸೀದಿ ವಾಣಿಜ್ಯ ಸಂಕೀರ್ಣದಲ್ಲಿರುವ ಜಮೀತುಲ್ ಫಲಾಹ್ ದ ಘಟಕದ ಕಾರ್ಯಾಲಯದಲ್ಲಿ ಜರುಗಿತು.

ಮಾಜಿ ಅಧ್ಯಕ್ಷರು ಹಾಗೂ ಕೇಂದ್ರಸಮಿತಿಯ ಅಧ್ಯಕ್ಷರಾದ ಅಶ್ಪಾಕ್ ಅಹಮದ್  ಕಾರ್ಕಳ ನೂತನ ಅಧ್ಯಕ್ಷರಾದ ಮೊಹಮ್ಮದ್ ಗೌಸ್ ರಿಗೆ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭ ಉಪಾಧ್ಯಕ್ಷರಾದ ಸೈಯದ್ ಅಬ್ಬಾಸ್ ಅಂಚಿಕಟ್ಟೆ, ಅಬ್ದುಲ್ ರಶೀದ್ ಬಂಗ್ಲೆಗುಡ್ಡೆ, ಜೊತೆ ಕಾರ್ಯದರ್ಶಿ ಶೇಕ್ ನಾಸಿರ್ ಬೈಲೂರು, ಸಂಘಟನಾ ಕಾರ್ಯದರ್ಶಿ ಸೈಯದ್ ಹಸನ್, ಮಾಜಿ ಉಪಾಧ್ಯಕ್ಷ ಸೈಯದ್ ಮೊಹಮ್ಮದ್ ಕಾಸಿಂ, ಮಾಜಿ ಕೋಶಧಿಕಾರಿ ಮೊಹಮ್ಮದ್ ಯಾಕೂಬ್ ಸಾಹೇಬ್, ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News