×
Ad

ಮರ್ಕಝ್‌ನಿಂದ 2025-28ರ ಕಾರ್ಯಯೋಜನೆಗಳ ಅನುಷ್ಠಾನ ಕುರಿತು ಸಭೆ

Update: 2025-04-27 18:08 IST

ಕೋಝಿಕೋಡ್: ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಮಹತ್ವ ನೀಡಿ ಶಿಕ್ಷಣ-ಸಾಮಾಜಿಕ ಕಲ್ಯಾಣ ಯೋಜನೆ ಗಳನ್ನು ವ್ಯಾಪಕಗೊಳಿಸಲು ಮರ್ಕಝು ಸಖಾಫತಿ ಸುನ್ನಿಯ್ಯಾ ನಿರ್ಧರಿಸಿದೆ. ಅದರಂತೆ 2025-28ರ ಕಾಲಾವಧಿಯ ಯೋಜನೆಗಳ ಕುರಿತಂತೆ ಸಭೆ ನಡೆಸಲಾಗಿದೆ.

ಸಭೆಯನ್ನು ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ಅಲ್ ಬುಖಾರಿ ಉದ್ಘಾಟಿಸಿದರು. ಸಯ್ಯಿದ್ ಅಲಿ ಬಾಫಖಿ ತಂಙಳ್ ದುಆಗೈದರು. ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯ ಭಾಷಣಗೈದರು.

ಸಭೆಯಲ್ಲಿ ಸಯ್ಯಿದ್ ಅಬ್ದುಲ್ ಫತ್ತಾಹ್ ಅಹ್ದಲ್ ಅವೆಲಂ, ಸಿ. ಮುಹಮ್ಮದ್ ಫೈಸಿ, ವಿ.ಪಿ.ಎಂ. ಫೈಝಿ ವಿಳ್ಯಾಪ್ಪಳ್ಳಿ, ಅಬೂ ಹನೀಫಲ್ ಫೈಝಿ ತನ್ನಲ, ತ್ವಾಹಾ ಮುಸ್ಲಿಯಾರ್ ಕಾಯಂಕುಳಂ, ಪಿ.ವಿ. ಮೊಯ್ದಿನ್ ಕುಟ್ಟಿ ಮುಸ್ಲಿಯಾರ್ ತಾಝಪ್ರ, ಎ.ಪಿ. ಅಬ್ದುಲ್ ಕರೀಂ ಹಾಜಿ, ಡಾ. ಮುಹಮ್ಮದ್ ಅಬ್ದುಲ್ ಹಕೀಮ್ ಅಝ್ಹರಿ, ರಹ್ಮತುಲ್ಲಾಹ್ ಸಖಾಫಿ ಎಳಮರಂ, ಸಯ್ಯಿದ್ ಮುಹಮ್ಮದ್ ತುರಾಬ್ ಸಖಾಫಿ, ಅಬ್ದುಲ್ ಮಜೀದ್ ಕಕ್ಕಾಡ್, ಎನ್. ಅಲಿ ಅಬ್ದುಲ್ಲಾ, ಪ್ರೊ.ಎ.ಕೆ. ಅಬ್ದುಲ್ ಹಮೀದ್, ಸಿ.ಪಿ. ಸೈದಲವಿ ಮಾಸ್ಟರ್, ಎ. ಸೈಫುದ್ದೀನ್ ಹಾಜಿ, ಸಿ.ಪಿ. ಉಬೈದುಲ್ಲಾ ಸಖಾಫಿ, ಸಯ್ಯಿದ್ ಶಿಹಾಬುದ್ದೀನ್ ಅಹ್ದಲ್ ಮುತ್ತನೂರು, ಸಯ್ಯಿದ್ ಸ್ವಾಲಿಹ್ ಶಿಹಾಬ್ ಕುಟ್ಟಿಚಿರ, ಕಲ್ತರ ಅಬ್ದುಲ್ ಖಾದಿರ್ ಮುಸ್ಲಿಯಾರ್, ಕೂಟಂಬರ ಅಬ್ದುಲ್ ರಹ್ಮಾನ್ ದಾರಿಮಿ, ಪಿ.ಕೆ. ಎಂ. ಸಖಾಫಿ ಇರಿಂಝಲ್ಲೂರು, ಪಿ.ಸಿ. ಇಬ್ರಾಹೀಂ ಮಾಸ್ಟರ್, ಪಿ. ಮುಹಮ್ಮದ್ ಯೂಸುಫ್, ಡಾ. ಅಬ್ದುಸ್ಸಲಾಂ, ಸಯ್ಯಿದ್ ಫಸಲ್ ತಂಳ್ ವಾಟಾಣಪಳ್ಳಿ, ಮನ್ಸೂರ್ ಹಾಜಿ ಚೆನ್ನೈ, ಸಿದ್ದೀಕ್ ಸಖಾಫಿ ಒಟ್ಟಪಾಲಂ, ವಿ.ಎಚ್. ಅಲಿ ದಾರಿಮಿ ಎರ್ನಾಕುಳಂ, ಬಿ.ಎಸ್. ಅಬ್ದುಲ್ಲ ಕುಂಞಿ ಫೈಝಿ, ಟಿ.ಕೆ. ಅಬ್ದರ‌್ರಹ್ಮಾನ್ ಬಾಖವಿ ಮಡವೂರು, ಊರಗಂ ಅಬ್ದುರ‌್ರಹ್ಮಾನ್ ಸಖಾಫಿ, ಉಸ್ಮಾನ್ ಮುಸ್ಲಿಯಾರ್ ವಯನಾಡ್, ಪಿ.ಕೆ. ಅಲಿಕುಂಞಿ ದಾರಿಮಿ, ಕೆ.ಎಸ್. ಮುಹಮ್ಮದ್ ಸಖಾಫಿ, ಅಬ್ದುಲ್ ಜಬ್ಬಾರ್ ಸಖಾಫಿ ಪೆಝಿಕ್ಕಾಪಿಲ್ಲಿ, ಸುಲೈಮಾನ್ ಕರುವಳ್ಳೂರು, ಅಬ್ದುಲ್ ಮುತ್ವಲಿಬ್ ಸಖಾಫಿ, ಪುನೂರ್ ಅಹ್ಮದ್ ಹಾಜಿ ಪಾಲ್ಗೊಂಡಿದ್ದರು.

ಈ ಯೋಜನೆಯ ಕಾರ್ಯನಿರ್ವಹಣೆಗೆ ಸುಲಭವಾಗುವಂತೆ ದೇಶವನ್ನು 16 ಪ್ರದೇಶಗಳಾಗಿ ಗುರುತಿಸಿ ಸಮನ್ವಯಗೊಳಿಸಲಾಗುತ್ತದೆ. ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳ ನವೀಕರಣದ ಮೂಲಕ ಮಾತ್ರ ಗ್ರಾಮೀಣ ಜನತೆಗೆ ಅಭಿವೃದ್ಧಿ ಸಾಧ್ಯವಿದೆ ಎಂಬುದನ್ನು ಕೆಲವು ವರ್ಷಗಳ ಅನುಭವದಿಂದ ಅರ್ಥಮಾಡಿಕೊಂಡು ಈ ವ್ಯಾಪಕ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಸಮಸ್ತ ನೂರನೇ ವರ್ಷದ ಕಾರ್ಯಯೋಜನೆಯ ಸಂಕಲ್ಪವನ್ನು ಸಾಕಾರಗೊಳಿಸುವುದೇ ಇವುಗಳ ಗುರಿಯಾಗಿದೆ. ಪಶ್ಚಿಮ ಬಂಗಾಳ, ಗುಜರಾತ್, ಕರ್ನಾಟಕ ವಲಯಗಳಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಂಪಸ್‌ಗಳನ್ನು ಇಂಟಿಗ್ರೇಟೆಡ್ ನಾಲೆಡ್ಜ್ ಹಬ್‌ಗಳಾಗಿ ಪರಿವರ್ತಿಸಲು, ಮರ್ಕಝ್ ಪಬ್ಲಿಕ್ ಶಾಲೆಗಳನ್ನೂ ಸೀಕ್ವ್ ನೆಟ್‌ವರ್ಕ್‌ಗಳನ್ನೂ ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು, ಸಣ್ಣಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶ ಗಳಲ್ಲಿ ಲಾ ಕಾಲೇಜುಗಳು ಮತ್ತು ಕಾನೂನು ಸಹಾಯ ಕೇಂದ್ರಗಳನ್ನು ಸ್ಥಾಪಿಸಲು, ವೈದ್ಯಕೀಯ ಮಿಷನ್ ಭಾಗವಾಗಿ ಆಸ್ಪತ್ರೆಗಳು ಮತ್ತು ಅಧ್ಯಯನ ಕೇಂದ್ರಗಳನ್ನು ನಿರ್ಮಿಸಲು ಯೋಜಿಸಲಾಗಿದೆ.

ಅದಲ್ಲದೆ ಕೇರಳದ ಮರ್ಕಝ್ ಸಂಸ್ಥೆಗಳಲ್ಲಿ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರವೇಶ ಸೌಲಭ್ಯ ಕಲ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಘೋಷಿಸಿದ ಖಾಸಗಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಸಂಬಂಧಿಸಿದ ಮೊದಲ ಕಾರ್ಯಪಥಗಳನ್ನೂ, ಮರ್ಕಝ್‌ನ 50ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನೂ ಈ ಸಭೆಯಲ್ಲಿ ಚರ್ಚಿಸಲಾಗಿದೆ.

ಜಾಮಿಅ ಮರ್ಕಝ್ ಮತ್ತು ಸಮನ್ವಯ ಸಂಸ್ಥೆಗಳು ಮುಂತಾದವುಗಳನ್ನು ಕೇಂದ್ರೀಕರಿಸಿ ಕುಶಲತೆ ಅಭಿವೃದ್ದಿ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಉದ್ಯಮಶೀಲತಾ ತರಬೇತಿಯನ್ನು ಬಲಪಡಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News