×
Ad

ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ವಾರ್ಷಿಕೋತ್ಸವ

Update: 2025-02-07 14:38 IST

ಮುಡಿಪು : ಪಿ. ಎ. ಫಾರ್ಮಸಿ ಕಾಲೇಜಿನ ವಾರ್ಷಿಕೋತ್ಸವ ವು 'ಎಪಿಸ್ಟಿಮ್ 2ಕೆ25' ನಡುಪದವಿನ ಪೇಸ್ ಸಭಾಂಗಣದಲ್ಲಿ ಜರುಗಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶ್ರೀನಿವಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಎ. ಆರ್. ಶಬರಾಯ, ಆವಿಷ್ಕಾರ, ನಾಯಕತ್ವ ಮತ್ತು ನಿರಂತರ ಕಲಿಕೆಯ ಮಹತ್ವವನ್ನು ತಿಳಿಸಿದರು.

ಪಿ. ಎ. ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಎಂ. ಕೆ. ರಮೀಸ್, ಪಿ. ಎ. ಪಾಲಿಟೆಕ್ನಿಕ್ ಪ್ರಾಂಶುಪಾಲ ಪ್ರೊಫೆಸರ್ ಕೆ. ಪಿ. ಸೂಫೀ ಹಾಗೂ ಪಿ. ಎ. ಫಿಸಿಯೋಥೆರಪಿ ಪ್ರಾಂಶುಪಾಲ ಡಾ. ಸಜೀಶ್ ರಘುನಾಥನ್ ರವರು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಫಾರ್ಮಸಿ ಶಿಕ್ಷಣದ ಮಹತ್ವದ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡರು.

ಪಿ. ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ವಿವಿಯಲ್ಲಿ ಬೋರ್ಡ್ ಆಫ್ ಸ್ಟಡೀಸ್ ಚೇರ್‌ಮ್ಯಾನ್ ಆಗಿ ನೇಮಕಗೊಂಡ ಡಾ. ಸಲೀಮುಲ್ಲಾ ಖಾನ್‌ರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನೆ, ಕಾಲೇಜು ಮ್ಯಾಗಝಿನ್ 'ಫಾರ್ಮಾ ಏಸ್' ಮತ್ತು ಶೈಕ್ಷಣಿಕ ಬುಲೆಟಿನ್ 'ಅಪೊಥಿಕ' ಬಿಡುಗಡೆ ಹಾಗೂ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿ ಸವಾದ್ ಪ್ರಾರ್ಥಿಸಿದರು, ಡಾ. ಮುಹಮ್ಮದ್ ಮುಬೀನ್ ಸ್ವಾಗತಿಸಿದರು. ನಜ್ಫತ್ ಮತ್ತು ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು. ಡಾ, ರಜಿಶಾ ವಂದಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News