ಮೇ 10ರಂದು ಬಿ.ಎಂ.ಬಶೀರ್ ಅವರ 'ಅಗ್ನಿಪಥ' ಕಾದಂಬರಿ ಬಿಡುಗಡೆ
Update: 2025-05-08 15:43 IST
ಮಂಗಳೂರು: ಹಿರಿಯ ಪತ್ರಕರ್ತ, ಕತೆಗಾರ, ವಾರ್ತಾಭಾರತಿಯ ಸುದ್ದಿ ಸಂಪಾದಕ ಬಿ.ಎಂ.ಬಶೀರ್ ಅವರ ಕಾದಂಬರಿ 'ಅಗ್ನಿಪಥ' ಮೇ 10ರಂದು ಶನಿವಾರ ಬಿಡುಗಡೆಗೊಳ್ಳಲಿದೆ.
ಕವಿತಾ ಪ್ರಕಾಶನ ಮೈಸೂರು, ಸಂತ ಅಲೋಶಿಯಸ್ ಪರಿಗಣಿತ ವಿವಿಯ ಕನ್ನಡ ವಿಭಾಗದ ಸಹಯೋಗದಲ್ಲಿ ಸಂಜೆ 3:30ಕ್ಕೆ ಮಂಗಳೂರಿನ ಬಾವುಟಗುಡ್ಡೆ ಸಮೀಪದ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಹೋದಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕವಿತಾ ಪ್ರಕಾಶನ ಮೈಸೂರು ಹೊರತರುತ್ತಿರುವ 'ಅಗ್ನಿಪಥ'ವನ್ನು ಚಿಂತಕ, ಅಂಕಣಕಾರ ಶಿವಸುಂದರ್ ಬಿಡುಗಡೆಗೊಳಿಸುವರು. ಹಿರಿಯ ಲೇಖಕ ವಾಸುದೇವ ಬೆಳ್ಳೆ ಕೃತಿ ಪರಿಚಯ ಮಾಡುವರು.
ಹಿರಿಯ ಸಾಹಿತಿ ಚಂದ್ರಕಲಾ ನಂದಾವರ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿವಿ ಕುಲಪತಿ ರೆ.ಡಾ.ಪ್ರವೀಣ್ ಮಾರ್ಟಿಸ್, ಕವಿತಾ ಪ್ರಕಾಶನದ ಗಣೇಶ ಅಮೀನಗಡ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.