ಸೌದಿ ಅರೇಬಿಯಾದ ASQ ಸಂಸ್ಥೆಯಿಂದ ಹಳೆಕೋಟೆಯಲ್ಲಿ ಇಫ್ತಾರ್ ಕೂಟ
Update: 2026-03-08 19:28 IST
ಉಳ್ಳಾಲ: ಸೌದಿ ಅರೇಬಿಯಾದ ASQ ಕಂಪೆನಿಯ ವತಿಯಿಂದ ಹಳೆಕೋಟೆ ಶಾಲಾ ವಠಾದದಲ್ಲಿ ಬೃಹತ್ ಇಫ್ತಾರ್ ಕೂಟ ನಡೆಯಿತು.
ಹಾಜಿ UH ಝೈನುದ್ದೀನ್ ಅವರು ಅಧ್ಯಕ್ಷತೆ ವಹಿಸಿದ್ದರು. ಅಲ್ ಕರೀಂ ಜುಮಾ ಮಸೀದಿಯ ಅಧ್ಯಕ್ಷ ತ್ವಾಹಾ ಹಾಜಿ ಮತ್ತು ಕೋಶಾಧಿಕಾರಿ ಜಮಾಲುದೀನ್ ಹಳೆಕೋಟೆ ಅವರ ಉಪಸ್ಥಿತಿಯೊಂದಿಗೆ ಮಸೀದಿಯ ಖತೀಬ್ ಹಾಫಿಳ್ ಸಿರಾಜುದ್ದೀನ್ ಸಖಾಫಿ ಹಿಮಮಿ ಕಾರ್ಯಕ್ರಮ ಉದ್ಘಾಟಿಸಿ, ಉಪವಾಸದ ಮಹತ್ವ ಮತ್ತು ಅದರ ಪ್ರಯೋಜನದ ಬಗ್ಗೆ ಮಾತನಾಡಿದರು.
ಈ ಸಂದರ್ಭ ಅತಿಥಿಗಳಾಗಿ UN ಇಬ್ರಾಹಿಂ ಫಾರೂಕ್ UH, ಇಬ್ರಾಹಿಂ MH,ಮೊಹಮ್ಮದ್ ಕೆ, ಅಲ್ತಾಫ್ UH, ಬದ್ರುದ್ದೀನ್ ಹಾಜಿ ಮಂಚಿಲ ಮತ್ತು ಹಳೆಕೋಟೆಯ ಹಲವು ಹಿರಿಯ ಗಣ್ಯರು ಉಪಸ್ಥಿತರಿದ್ದರು.
ASQ ಅಂತರಾಷ್ಟ್ರೀಯ ಖಾಸಗಿ ಲಿಮಿಟೆಡ್ KSA ಸಂಸ್ಥೆಯ CEO ಇಮ್ತಿಯಾಝ್ ಹಳೆಕೋಟೆ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಹಳೆಕೋಟೆಯ ಯುವಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಸಫ್ವಾನ್ ಹಳೆಕೋಟೆ ಕಾರ್ಯಕ್ರಮ ನಿರೂಪಿಸಿದರು.