×
Ad

ಕಲ್ಲಡ್ಕ ವಲಯ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ: ಮಾಣಿ ಬಾಲವಿಕಾಸ ಶಾಲೆಗೆ ಸಮಗ್ರ ಪ್ರಶಸ್ತಿ

Update: 2024-09-18 10:03 IST

ಬಂಟ್ವಾಳ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಹಾಗೂ ಮಾಣಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಕಲ್ಲಡ್ಕ ವಲಯ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿಯು ಮಾಣಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಸ್ಪರ್ಧೆಯಲ್ಲಿ ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯು 11 ಪ್ರಥಮ ಹಾಗೂ 2 ದ್ವಿತೀಯ ಬಹುಮಾನಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಧಾರ್ಮಿಕ ಪಠಣ ಸಂಸ್ಕೃತ ಮತ್ತು ಭಾವ ಗೀತೆ - ಸ್ವಸ್ತಿ (10ನೇ), ಕನ್ನಡ ಭಾಷಣ - ನಿವ್ಯಾ ರೈ (10ನೇ), ಇಂಗ್ಲಿಷ್ ಮತ್ತು ಹಿಂದಿ ಭಾಷಣ - ಪೂರ್ವಿ ಎ. ಭಾರದ್ವಾಜ್( 9ನೇ), ಕವನ ವಾಚನ - ದೇವಿಕಾ ಕೆ(9ನೇ), ಗಝಲ್ - ವೈಷ್ಣವಿ (10ನೇ), ರಸಪ್ರಶ್ನೆ - ಆರನ್ ಪೈಸ್(10 ನೇ) ಮತ್ತು ಪುನೀತ್ ಕೆಜಿ (10ನೇ), ಆಶು ಭಾಷಣ ಮತ್ತು ಚರ್ಚಾ ಸ್ಪರ್ಧೆ- ಪ್ರಗತಿ(9ನೇ ) ಹಾಗೂ ಕವ್ವಾಲಿ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ.

ಭರತನಾಟ್ಯದಲ್ಲಿ ಸಂಜನಾ ಎಸ್ ಭಟ್ (9ನೇ) ಹಾಗೂ ಜಾನಪದ ನೃತ್ಯ ತಂಡವು ದ್ವಿತೀಯ ಸ್ಥಾನ ಗಳಿಸಿದೆ. ವಿಜೇತ ವಿದ್ಯಾರ್ಥಿಗಳೆಲ್ಲರೂ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News