×
Ad

ಮಂಗಳೂರು: ಸ್ವಾತಂತ್ರ್ಯೋತ್ಸವ ಅಂಗವಾಗಿ ಪೋರ್ಟ್ ವಾರ್ಡ್ ಫ್ರೆಂಡ್ಸ್‌ ವತಿಯಿಂದ ಕ್ರೀಡಾಕೂಟ

Update: 2025-08-13 22:06 IST

ಮಂಗಳೂರು: ನಗರದ ಕಂದಕ್ ಪರಿಸರದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಪೋರ್ಟ್ ವಾರ್ಡ್ ಫ್ರೆಂಡ್ಸ್‌ ವತಿಯಿಂದ ಮಕ್ಕಳ ವಯೋಮಿತಿಯಂತೆ ನಾಡ ಕ್ರೀಡೆಗಳು ವಿಜೃಂಭಣೆಯಿಂದ ಜರುಗಿತು.

ಲಿಂಬು-ಚಮಚ ಓಟ, ಬಲೂನ್ ತುಂಡು, ತಲೆಯ ಮೇಲೆ ಬುಕ್ ನಡೆತ, ಹಗ್ಗ ಜಗ್ಗಾಟ ಹಾಗೂ ಇನ್ನಿತರ ರೀತಿಯ ಕ್ರೀಡೆಗಳು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಮಕ್ಕಳ ವಯೋಮಿತಿಯಂತೆ ನಡೆದಿದ್ದರಿಂದ ಪುಟಾಣಿಗಳ ನಡೆತವು ಜನರಿಗೆ ಮೆರೆಗು ನೀಡಿತು.

ಆಗಸ್ಟ್ 3 ರಂದು ಸೀನಿಯರ್ ವಿಭಾಗದ ಕ್ರಿಕೆಟ್ ನಲ್ಲಿ ಚಾಂಪಿಯನ್ ಮತ್ತು ರನ್ನರ್ ಆಗಿ ಟೀಮ್ ಅನ್ಸಾಫ್ ಹಾಗೂ ಟೀಂ ರಾಝಿಕ್, ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ಸ್ ಆಗಿ ಟೀಂ ಆದಿಲ್ ಮತ್ತು ರನ್ನರ್ ಆಗಿ ಟೀಂ ಫಾಹಿಂ ಗೆದ್ದುಕೊಂಡಿದೆ.

ಪ್ರಶಸ್ತಿ ಪುರಸ್ಕಾರಗಳು ಆ.15 ರಂದು ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂಜೆಯ ಕಾರ್ಯಕ್ರಮದಲ್ಲಿ ನೀಡಿ ಗೌರವಿಸುವುದು ಮತ್ತು ಈ ಪೋರ್ಟ್ ವಾರ್ಡ್ ಫ್ರೆಂಡ್ಸ್ ಆರ್ಥಿಕವಾಗಿ ಬಡ ಕುಟುಂಬಸ್ಥರಿಗೆ ಹೊಲಿಗೆ ಯಂತ್ರ, ಸೀರೆ ವಿತರಣೆ, ಸನ್ಮಾನ ಪುರಸ್ಕಾರ ಕಾರ್ಯಕ್ರಮಗಳನ್ನು ವರ್ಷಂಪ್ರತಿ ನಡೆಸಿಕೊಂಡು ಬಂದಿರುತ್ತದೆ.







Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News