×
Ad

ಮಂಗಳೂರು: ಹೊಟೇಲು ಪಾಲುದಾರ ಆತ್ಮಹತ್ಯೆ

Update: 2025-07-22 20:45 IST

ಮಂಗಳೂರು: ನಗರದ ಕದ್ರಿ ಬಳಿಯ ಹೊಟೇಲ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕುಲಶೇಖರ ಸಮೀಪದ ಮರೋಳಿಯ ಪ್ರಸಕ್ತ ಮಣ್ಣಗುಡ್ಡ ಫ್ಲ್ಯಾಟ್ ನಿವಾಸಿ ನಿತಿನ್ ಸುವರ್ಣ (41) ಆತ್ಮಹತ್ಯೆ ಮಾಡಿಕೊಂಡವರು. ನಿತಿನ್ ಸುವರ್ಣ ಪಾಲುದಾರಿಕೆಯಲ್ಲಿ ಹೊಟೇಲ್ ವ್ಯವಹಾರ ನಡೆಸುತ್ತಿದ್ದರು. ಅದಕ್ಕಾಗಿ ಬ್ಯಾಂಕ್, ಫೈನಾನ್ಸ್ ಸಾಲವನ್ನು ಪಡೆದಿದ್ದರು. ಅಲ್ಲದೆ ಕಾರು ಖರೀದಿಗೂ ಸಾಲ ಪಡೆದಿದ್ದರು. ಆದರೆ ಹೊಟೇಲ್ ವ್ಯವಹಾರದಿಂದ ಆರ್ಥಿಕ ಸಂಕಷ್ಟ ಉಂಟಾಗಿ ಪಾಲುದಾರರು ದೂರ ಸರಿದರು. ಇದರಿಂದ ಬೇಸತ್ತು ಸೋಮವಾರ ರಾತ್ರಿ ಫ್ಲ್ಯಾಟ್‌ನಲ್ಲಿ ವಿಷ ಸೇವನೆ ಮಾಡಿದ್ದಾರೆ ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News