ಮಂಗಳೂರು: ಬಸ್ ಢಿಕ್ಕಿಯಾಗಿ ಅಪರಿಚಿತ ಮಹಿಳೆ ಮೃತ್ಯು
Update: 2025-08-12 21:10 IST
ಮಂಗಳೂರು, ಆ.12: ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪ ಬಸ್ ಡಿಕ್ಕಿಯಾಗಿ ಅಪರಿಚಿತ ಮಹಿಳೆ ಯೊಬ್ಬರು ಗಂಭೀರ ಗಾಯಗೊಂಡು ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಮಂಗಳವಾರ ನಡೆದಿರುವುದು ವರದಿಯಾಗಿದೆ.
*ವಿವರ: ಆ.12ರಂದು ಬೆಳಗ್ಗೆ 5:30ರ ಸುಮಾರಿಗೆ ರಸ್ತೆ ಬದಿ ನಿಂತಿದ್ದ ಮಹಿಳೆಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿಯಾ ಗಿದೆ. ಇದರಿಂದ ಮಹಿಳೆಯ ತಲೆ, ಎದೆ ಭಾಗಕ್ಕೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಪ್ರಜ್ಞಾಹೀನ ಸ್ಥಿತಿಯಲಿದ್ದ ಮಹಿಳೆಯನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ವೈದ್ಯರು ಪರೀಕ್ಷಿಸಿದ ಬಳಿಕ ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಹಿಳೆ 5.3 ಅಡಿ ಎತ್ತರ, ಕಪ್ಪು ಬಣ್ಣದ ಬುರ್ಖಾ ಧರಿಸಿದ್ದಾರೆ.
ಮಹಿಳೆಯ ವಿವರ ಪತ್ತೆಯಾಗಿಲ್ಲ. ವಾರೀಸುದಾರರು ಇದ್ದಲ್ಲಿ ಕದ್ರಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.