×
Ad

ಬಿಜೆಪಿ ರೈತ ಮೋರ್ಚ ಮಾಜಿ ಜಿಲ್ಲಾಧ್ಯಕ್ಷ ರಾಧಕೃಷ್ಣ ಬೊಳ್ಳೂರು ಕಾಂಗ್ರೆಸ್ ಸೇರ್ಪಡೆ

Update: 2023-12-22 22:42 IST

ಮಂಗಳೂರು: ಬಿಜೆಪಿ ರೈತ ಮೋರ್ಚ ಮಾಜಿ ದ.ಕ. ಜಿಲ್ಲಾಧ್ಯಕ್ಷ ರಾಧಕೃಷ್ಣ ಬೊಳ್ಳೂರು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ಅಧಿಕೃತವಾಗಿ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್‌ರ ನಿರ್ದೇಶನದಂತೆ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಸಚಿವ ದಿನೇಶ್ ಗುಂಡೂರಾವ್ ಪಕ್ಷದ ಧ್ವಜ ನೀಡುವ ಮೂಲಕ ಬರಮಾಡಿಕೊಂಡರು.

ಈ ವೇಳೆ ಬಿಜೆಪಿ ಮುಖಂಡರಾದ ಸತ್ಯಪ್ರಸಾದ್ ಪುಳಿಮಾರಡ್ಕ, ಸಹಕಾರಿ ಸಂಘದ ಮಾಜಿ ನಿರ್ದೇಶಕ ಡಿ.ಕೆ.ಸುರೇಶ್ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ, ವೆಂಕಪ್ಪಗೌಡ, ಶಾಹುಲ್ ಹಮೀದ್, ಪ್ರವೀಣ್‌ಚಂದ್ರ ಆಳ್ವ, ಪಿ.ಎಸ್. ಗಂಗಾಧರ್ ಗೌಡ, ಸದಾನಂದ ಮಾವಾಜಿ, ಸುರೇಶ್ ಎಂ.ಎಚ್., ಇಟ್ಟಿಗುಂಡಿ ವೆಂಕಠರಮಣ, ಶಶಿಧರ.ಜೆ, ಕೆ.ಎಂ.ಮುಸ್ತಫಾ, ಜಯಪ್ರಕಾಶ್ ನೆಕ್ರಪ್ಪಾಡಿ, ಸತ್ಯಕುಮಾರ್ ಅಡಿಂಜ, ಜಯರಾಮ ಬೊಳ್ಳಾಜೆ, ಭವಾನಿ ಶಂಕರ್ ಕಲ್ಮಡ್ಕ, ರವಿ ಪೂಜಾರಿ, ಚೇತನ್, ಪವನ್ ಮುಂಡ್ರಾಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News