×
Ad

ಎಕೆ ಗ್ರೂಪ್ ಕಂಪನಿ ವತಿಯಿಂದ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ನೌಮಾನ್ ಪಜೀರ್ ರಿಗೆ ಸನ್ಮಾನ

Update: 2023-12-29 22:57 IST

ಮಂಗಳೂರು : ಪಜೀರ್ ಗ್ರಾಮದ ಅಬ್ದುಲ್ ರಹ್ಮಾನ್‌ ಮತ್ತು ಆಯಿಷಾ ದಂಪತಿಯ ಪುತ್ರ ನೌಮಾನ್ ಪಜೀರ್ ಅವರು ಪ್ರತಿಷ್ಠಿತ ಬಜಾಜ್ ಆಟೋ ಲಿಮಿಟೆಡ್ ಕಂಪನಿಯು ಮುಂಬೈನಲ್ಲಿ ಡಿಸೆಂಬರ್ 15ರಂದು ಆಯೋಜಿಸಿದ್ದ ರಾಷ್ಟ್ರಮಟ್ಟದ ಪಲ್ಸರ್ ಮೇನಿಯ 2:0 ಬೈಕ್ ಸ್ಟಂಟ್ ಮತ್ತು ಡ್ರೈವಿಂಗ್ ಕೌಶಲ್ಯಗಳ ಪ್ರದರ್ಶನದ ಮಾಸ್ಟರ್ ಆವೃತ್ತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಪ್ರಸ್ತುತ ನೌಮನ್ ಪಜೀರ್ ಅವರ ತಂದೆ ಎಕೆ ಗ್ರೂಪ್ ಕಂಪನಿಯಲ್ಲಿ ದುಡಿಯುತ್ತಿದ್ದು, ಕಂಪನಿಗೂ ಹೆಮ್ಮೆಯ ವಿಷಯವಾಗಿರುತ್ತದೆ. ಈ ಸಂದರ್ಭ ಕಂಪನಿಯ ವತಿಯಿಂದ ಅವರ ಸೇವೆಯನ್ನು ಗುರುತಿಸಿ,  ಸನ್ಮಾನಿಸಲಾಯಿತು.

ಈ ಸಂದರ್ಭ ಸಮಾರಂಭದ ಅಧ್ಯಕ್ಷತೆಯನ್ನು ಕಂಪನಿಯ ಮಾಲಕರಾದ ಎಕೆ ನಿಯಾಝ್ ವಹಿಸಿ‌ದ್ದರು. ಎಸ್ ಎಮ್ ಫಿಶರೀಸ್ ಇದರ ಮಾಲಕರಾದ ಎಸ್ಎಂ ಫಾರೂಕ್ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆದಿಲ್ ಪರ್ವೇಝ್ ಅಧ್ಯಕ್ಷರು ಎಚ್ಐಎಫ್ ಮಂಗಳೂರು, ಎಕೆ ಕಂಪನಿಯ ಮಾಲಕರಾದ ಎಕೆ ನೌಷಾದ್, ಎಕೆ ನಾಝಿಮ್, ಎಕೆ ಸಾಜಿದ್, ಮಸ್ಜಿದ್ ಎಹ್ಸಾನ್ ಧರ್ಮ ಗುರುಗಳಾದ ಮೌಲಾನ ತಯ್ಯುಬ್ ಉಸ್ತಾದ್, ಮೌಲಾನ ಅಲ್ತಾಫ್ ಉಸ್ತಾದ್, ಕಂಪನಿಯ ಪ್ರಧಾನ ವ್ಯವಸ್ಥಾಪಕ ಎಕೆ ಅಬ್ದುಲ್ ರಹ್ಮಾನ್ ಕೋಡಿಜಾಲ್, ಯುವ ಉದ್ಯಮಿ ಶಾಝಿರ್ ಕೊಡಿಜಾಲ್ ಮುಂತಾದ ಗಣ್ಯರು ರಾಷ್ಟ್ರಮಟ್ಟದಲ್ಲಿ ಬಾಲಕನ ಅದ್ಭುತ ಸಾಧನೆಯನ್ನು ಮೆಚ್ಚಿದರು.

ಈ ಸಂದರ್ಭ‌ ಕಂಪನಿಯ ಹಿರಿಯರಾದ ಶಿನೋದ್ ಕುಮಾರ್, ಇಬ್ರಾಹಿಂ ಮೊಂಟುಗೋಳಿ, ನೌಶಾದ್ ಕೃಷ್ಣಾಪುರ, ರಾಜೇಶ್ ಬಾಯ್, ಪುರುಷೋತ್ತಮ್, ಪ್ರಕಾಶ್ ಬೈಕಂಪಾಡಿ, ಅಶ್ರಫ್ ಪಜೀರ್ ಲತೀಫ್ ಕೋಡಿಜಾಲ್, ಅಬ್ದುಲ್ ಖಾದರ್ ಸಾಲತ್ತೂರ್, ಸಮೀರ್ ದೇರ್ಲಕಟ್ಟೆ, ಸಮೀರ್ ತುಂಬೆ, ಸೀತಾರಾಮ, ಪ್ರವೀನ್ ಪಜೀರ್,  ಫೆರ್ನಾಂಡಿಸ್, ಮಿಶ್ರಾಜಿ, ಸುನಿಲ್, ಬೃಂದಾವನ್, ಪ್ರಮೋದ್, ಬ್ರಹ್ಮಾನಂದ, ಫಾರೂಕ್ ಕೃಷ್ಣಾಪುರ ಮುಂತಾದವರು ಶುಭ ಹಾರೈಸಿದರು. ಹಲವಾರು ಕಾರ್ಮಿಕರೂ ಭಾಗವಹಿಸಿದ್ದರು.

ಕಂಪನಿಯ ಮಾಲಕರದ ಎಕೆ ಸಾಜಿದ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಂಪೆನಿಯ ಪ್ರಧಾನ ವ್ಯವಸ್ಥಾಪಕರಾದ ಅಬ್ದುಲ್ ರಹ್ಮಾನ್‌ ಕಾರ್ಯಕ್ರಮ ನಿರೂಪಿಸಿದರು. ಮಾಲಕರಾದ ಎಕೆ ನೌಷಾದ್ ವಂದಿಸಿದರು.








Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News