×
Ad

ಮಂಜನಾಡಿ ಅಲ್ ಮದೀನಾದಲ್ಲಿ ಮಡವೂರ್ ಸಮ್ಮೇಳನ ಪ್ರಚಾರ ಉದ್ಘಾಟನೆ

Update: 2025-02-01 09:38 IST

ಮಂಗಳೂರು: ಮಡೂವೂರು ಶೈಖ್ ಸಿ.ಎಂ.ವಲಿಯುಲ್ಲಾಹಿ (ಖ.)ಯವರ ಸ್ಮರಣಾರ್ಥ, ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ನೇತೃತ್ವದಲ್ಲಿ ಮಡವೂರಿನಲ್ಲಿ ಕಾರ್ಯಾಚರಿಸುತ್ತಿರುವ ಸಿಎಂ ಸೆಂಟರ್ ವಿದ್ಯಾ ಸಂಸ್ಥೆಯ 35ನೇ ವಾರ್ಷಿಕ ಸಮ್ಮೇಳನದ ಕರ್ನಾಟಕ ರಾಜ್ಯದ ಪ್ರಚಾರ ಉದ್ಘಾಟನಾ ಸಮಾವೇಶವು ಜ.31ರಂದು ಮಂಜನಾಡಿಯ ಅಲ್ ಮದಿನಾ ಕ್ಯಾಂಪಸ್ ನಲ್ಲಿರುವ ಶರಫುಲ್ ಉಲಮಾ ಆಡಿಟೋರಿಯಂನಲ್ಲಿ ನಡೆಯಿತು

ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಮಖ್ಬರ ಝಿಯಾರತ್ ಗೆ ಸೈಯದ್ ಶಫೀಕ್ ಅಲ್ ಹಾದಿ ಸಅದಿ ನೇತೃತ್ವ ವಹಿಸಿದರು.

ಮಡವುರ್ ಸಿ ಎಂ ಸೆಂಟರ್ ಪ್ರಧಾನ ಕಾರ್ಯದರ್ಶಿ ಟಿ ಕೆ ಅಬ್ದುಲ್ ರಹ್ಮಾನ್ ಬಾಖವಿ ನೇತೃತ್ವದಲ್ಲಿ ನಡೆದ ರಾಜ್ಯ ಪ್ರಚಾರ ಕಾರ್ಯಕ್ರಮವನ್ನು ಮಂಜನಾಡಿ ಅಲ್ ಮದೀನಾ ಕಾಂಪ್ಲೆಕ್ಸ್ ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷ ಅಶ್ ಅರಿಯ ಮುಹಮ್ಮದ್ ಅಲಿ ಸಖಾಫಿ ಅಧ್ಯಕ್ಷ ತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಡವೂರು ಸಿಎಂ ಸೆಂಟರ್ ಕಾರ್ಯದರ್ಶಿ ಸೈಯದ್ ಖಲೀಲ್ ಬಾಅಲವಿ ತಂಙಳ್ ಮಡವೂರು, ಡಾ.ಎಮ್ಮೆಸ್ಸೆಮ್ ಅಬ್ದುಲ್ ರಶೀದ್ ಝೖನಿ, ಮುಹಿಮ್ಮಾತ್ ಮುದರ್ರಿಸ್ ಮೂಸ ಸಖಾಫಿ ಕಳತೂರ್ ಸಂದೇಶ ಭಾಷಣ ಮಾಡಿದರು,

ಸೈಯದ್ ಉವೈಸ್ ತಂಙಳ್, ಉಮರ್ ಮಾಸ್ಟರ್ ಎನ್ ಎಸ್, ಇಸ್ಮಾಯೀಲ್ ಸಅದಿ ಉರುಮನೆ, ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ವಕ್ಫ್ ಸಲಹಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಮೊಗರ್ಪಣೆ, ಮುಹಮ್ಮದ್ ಕುಂಞಿ ಅಮ್ಜದಿ, ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಪ್ರಚಾರ ಸಮಿತಿ ಕಾರ್ಯದರ್ಶಿ ಸಲೀಮ್ ಕನ್ಯಾಡಿ ಸ್ವಾಗತಿಸಿದರು. ಹಂಝ ಮದನಿ ಬೆಳ್ತಂಗಡಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News