×
Ad

ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಬಾತಿಷಾ ಆತೂರು ಆಯ್ಕೆ

Update: 2025-02-08 22:23 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಬಾತಿಷಾ ಆತೂರು 4262 ಭರ್ಜರಿ ಮತಗಳಿಂದ ಚುನಾಯಿತರಾಗಿ ಆಯ್ಕೆಯಾಗಿದ್ದಾರೆ.

ಆತೂರು ಬೈಲ್ ನಿವಾಸಿಯಾಗಿರುವ ಇಬ್ರಾಹಿಂ ಬಾತಿಷಾ ಆತೂರು ವಿದ್ಯಾರ್ಥಿ ಜೀವನದಲ್ಲೇ ಕಾಂಗ್ರೆಸ್ ಪಕ್ಷದ ಪರ ಒಲವು ಹೊಂದಿದ್ದರು. ಎನ್.ಎಸ್.ಯು. ಐ ಕಾಲೇಜು ಘಟಕದ ಅಧ್ಯಕ್ಷರಾಗಿ, ಎನ್.ಎಸ್.ಯು. ಐ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ,ಎನ್.ಎಸ್.ಯು. ಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ, ಎನ್.ಎಸ್.ಯು. ಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಯುವ ಕಾಂಗ್ರೆಸ್ ಕಡಬ ತಾಲೂಕು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಸುತ್ತ ಐ ಬಿ ವೆಲ್ಪ್ರೇರ್ ಅಸೋಸಿಯೇಷನ್ ಪುತ್ತೂರು ಇದರ ಅಧ್ಯಕ್ಷರಾಗಿ, ಎಂ ಎಂ ಯೈ ಸಿ ಬೆಂಗಳೂರು ಇದರ ನಿರ್ದೇಶಕರಾಗಿ, ಅಲ್ ಸಫರ್ ಹೆಲ್ಪ್ ಲೈನ್ ಆತೂರು ಬೈಲ್ ಇದರ ಅಧ್ಯಕ್ಷರಾಗಿ, ಡಿಎಪಿ ಫೌಂಡೇಶನ್ ಸ್ಥಾಪಕರಾಗಿ, ಬೆಂಗಳೂರು ಜಿಲ್ಲಾ ವಿಖಾಯ ಚೆಯರ್ಮನ್ ಯಾಗಿ ಸೇವೆ ಸಲ್ಲಿಸುತ್ತಾ ಇದ್ದಾರೆ.

ಬಾತಿಷಾ ಆತೂರು ಅವರು ಪ್ರಾಥಮಿಕ ಶಿಕ್ಷಣವನ್ನು ಕೊಯಿಲ ಸರ್ಕಾರಿ ಶಾಲೆಯಲ್ಲಿ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ವನ್ನು ರಾಮಕುಂಜೇಶ್ವರ ಕಾಲೇಜಿನಲ್ಲಿ , ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜ್ ಪುತ್ತೂರಿನಲ್ಲಿ ಪೂರೈಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಾ ಸಮಾಜ ಸೇವೆ ಮಾಡುತ್ತಿದ್ದಾರೆ.

ಇವರು ಆತೂರು ಬೈಲ್ ಮಸೀದಿಯ ಮಾಜಿ ಅಧ್ಯಕ್ಷ ಮತ್ತು ಹಿರಿಯ ಕಾಂಗ್ರೆಸಿಗ ಡಿಎ ಪುತ್ತುಮೋನು ಹಾಗೂ ಡಿ ಎ ಶಹನಾಝ್ ದಂಪತಿಯ ಏಕೈಕ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News