×
Ad

ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ವತಿಯಿಂದ ಮಾಹಿತಿ ಶಿಬಿರ

Update: 2025-02-22 22:28 IST

ಬಂಟ್ವಾಳ : ತಾಲೂಕು ಸಂಯುಕ್ತ ಜಮಾತ್ ಕಮಿಟಿ ವತಿಯಿಂದ ವಕಪ್ ಮತ್ತು ಅಲ್ಪಸಂಖ್ಯಾತ ಇಲಾಖೆ ಸೌಲಭ್ಯಗಳ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಗುಡ್ಡೆ ಅಂಗಡಿ ಖತೀಬ್ ಕೆ.ಪಿ.ಮೊಹಮ್ಮದ್ ಹತಿಫ್ ದಾರಿಮಿ ದುವಾ ನೆರವೇರಿಸಿದರು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಮುಜೀಬುಲ್ಲಾ ಜಫಾರಿ ಕೆ.ಎ.ಎಸ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅಲ್ಪಸಂಖ್ಯಾತ ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್ ವಕ್ಪ್ ಬೋರ್ಡ್ ನಿಂದ ಸಿಗುವ ಸವಲತ್ತು ಮತ್ತು ವಕ್ಫ್ ಬೋರ್ಡಿನಲ್ಲಿ ನೋಂದಾಯಿ‌ ತವಾದ ಸಂಸ್ಥೆಗಳ ನಿರ್ವಹಣೆ, ಆಡಳಿತದ ಬಗ್ಗೆ ಮಾಹಿತಿ ನೀಡಿ, ಸಭಿಕರ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು.

ಮಂಗಳೂರಿನ ಮೂತ್ರಪಿಂಡ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಮೊಯ್ದಿನ್ ನಫ್ಸಿರ್ ಕಿಡ್ನಿ ಡಯಾಲಿಸಿಸ್ ರೋಗಿಗಳಿಗೆ ಅರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಜಮಿಯತುಲ್ ಫಲಾಹ್ ದ.ಕ.ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಕಾರ್ಯಕ್ರಮ ಉದ್ಘಾಟಿಸಿ ದರು. ಮೊಹಮ್ಮದ್ ಕಳವಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅದ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಮಾತನಾಡಿ , ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಕಿಡ್ನಿ ಡಯಾಲಿಸಿಸ್ ಬಡ ರೋಗಿಗಳಿಗೆ ಸಂಸ್ಥೆಯ ವತಿ ಯಿಂದ ಕೊಡುವ ಸಹಾಯಧನಕ್ಕಾಗಿ ತಾಲೂಕಿನ ಎಲ್ಲಾ ಜಮಾಅತ್ ನವರು ಸಹಕರಿಸುವಂತೆ ವಿನಂತಿ ಮಾಡಿದರು.

ಸಂಸ್ಥೆಯ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್ ಸ್ವಾಗತಿಸಿ, ನೋಟರಿ ಅಬೂಬಕ್ಕರ್ ವಿಟ್ಲ ವಂದಿಸಿದರು. ರಝಾಕ್ ಮಾಸ್ಟರ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News