×
Ad

ಎಐಟಿಯುಸಿ ಮುಂದಾಳು ಬಿ ನಾರಾಯಣ ನಿಧನ

Update: 2025-03-10 20:23 IST

ಮಂಗಳೂರು: ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ದಕ್ಷಿಣ ಕನ್ನಡ ಮತ್ತು ಉಡುಪಿ ಸಮಿತಿಯ ಸದಸ್ಯ ಬಿ ನಾರಾಯಣ (65) ಸೋಮವಾರ ಬೆಳಗ್ಗೆ ಹೃದಯಘಾತದಿಂದ ನಿಧನರಾದರು.

ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಗಣೇಶ ಬೀಡಿ ಕಂಪೆನಿಯಲ್ಲಿ ಉದ್ಯೋಗಿಯಾಗಿ ಸೇರಿದ ಇವರು ತಮ್ಮ ಉತ್ತಮ ಕಾರ್ಯ ನಿರ್ವಹಣೆ ಯಿಂದ ಪಾರ್ಟನರ್ ಆಗಿ ನಿವೃತ್ತಿ ಹೊಂದಿದ್ದರು.

ಎಐಟಿಯುಸಿ ನೇತ್ರತ್ವದ ಗಣೇಶ ಬೀಡಿ ನೌಕರರ ಸಂಘದಲ್ಲಿ ಸಕ್ರಿಯವಾಗಿದ್ದ ಇವರು ಅದರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕರ್ನಾಟಕ ರಾಜ್ಯ ಬೀಡಿ ವರ್ಕರ್ಸ್‌ ಫೆಡರೇಷನ್‌ನ ಉಪಾಧ್ಯಕ್ಷರಾಗಿಯೂ ಅವರು ದುಡಿದಿದ್ದರು.

ನಾರಾಯಣರ ನಿಧನಕ್ಕೆ ಗಣೇಶ ಬೀಡಿ ನೌಕರರ ಸಂಘ ತನ್ನ ಸಂತಾಪ ಸೂಚಿಸುತ್ತದೆ. ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಎಐಟಿಯುಸಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದೆ ಎಂದು ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News