×
Ad

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ: ನೂತನ ಆಯುಕ್ತರಾಗಿ ಮುಹಮ್ಮದ್ ನಝೀರ್

Update: 2025-06-11 21:20 IST

ಮುಹಮ್ಮದ್ ನಝೀರ್

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಮುಹಮ್ಮದ್ ನಝೀರ್ ಅವರನ್ನು ಸರಕಾರ ನಿಯೋಜಿಸಿದೆ.

ಈ ವರೆಗೆ ಆಯುಕ್ತರಾಗಿದ್ದ ನೂರ್ ಜಹಾನ್ ಖಾನಂ ಅವರಿಗೆ ವರ್ಗಾವಣೆಯಾಗಿದ್ದು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕರಾಗಿದ್ದ ಮುಹಮ್ಮದ್ ನಝೀರ್ ಅವರನ್ನು ನಿಯೋಜಿಸಿ ಸರಕಾರ ಜೂ.10ರಂದು ಆದೇಶ ಹೊರಡಿಸಿದೆ.

ಮುಹಮ್ಮದ್ ನಝೀರ್ ಈ ಹಿಂದೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮತ್ತು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿ, ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News