×
Ad

ಬೆಳ್ತಂಗಡಿ| ದಾರಿ ತಪ್ಪಿ ಬಂದ ವೃದ್ಧೆಯನ್ನು ಮನೆಗೆ ತಲುಪಿಸಿದ ಗ್ರಾ.ಪಂ. ಸದಸ್ಯ ಅಬ್ದುಲ್ ಕರೀಂ

Update: 2025-06-24 22:29 IST

ಬೆಳ್ತಂಗಡಿ: ಕಾಜೂರು ಸಮೀಪದ ನಿವಾಸಿ ಸುಮಾರು 85 ವರ್ಷ ಪ್ರಾಯದ ಅಲಿಮಮ್ಮ ಎಂಬವರು ಸಂಬಂಧಿಕರ ಮನೆ ಬೋಳಿಯಾರಿಗೆಂದು ಒಬ್ಬರೇ ಕಾಜೂರಿನಿಂದ ಹೊರಟವರು ಬೆಳ್ತಂಗಡಿಯಿಂದ ದಿಕ್ಕು ತಪ್ಪಿ ಪುತ್ತೂರುಗೆ ಹೋಗುವ ಸರಕಾರಿ ಎಕ್ಸ್ ಪ್ರೆಸ್ ಬಸ್ಸಿಗೆ ಹತ್ತಿದರು. ವಯೋವೃದ್ದೆಯ ಮಾತು ಕಂಡಕ್ಟರ್ ಗೆ ಅರ್ಥವಾಗದೇ ಗೇರುಕಟ್ಟೆಯಲ್ಲಿ ಇಳಿಸಿಬಿಟ್ಟರು.

ಈ ವೃದ್ದೆಗೆ ದಿಕ್ಕು ದೋಚದಾಯಿತು. ಬಸ್ಸಿನಲ್ಲಿ ಪುತ್ತೂರು ಕಡೆ ಪ್ರಯಾಣಿಸುತ್ತಿದ್ದ ಈ ಹಿಂದೆ ಬೆಳ್ತಂಗಡಿ ಠಾಣೆಯಲ್ಲಿ ಪೊಲೀಸ್ ಆಗಿದ್ದ ಸದ್ರಿ ಮಂಗಳೂರಿನ ಸೈಬರ್ ಕ್ರೈಮ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಸತೀಶ್ ಹಾಗೂ ಸಾಮಾಜಿಕ ಕಾರ್ಯಕರ್ತ ಬೆಳಾಲಿನ ಆದಂ ಎಂಬವರು ಗೇರುಕಟ್ಟೆಯ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಗೆ ಮಾಹಿತಿ ತಿಳಿಸಿದರು.

ತಕ್ಷಣ ಪೇಟೆಗೆ ಬಂದು ಹುಡುಕಾಡಿದಾಗ ಬಸ್ಸು ನಿಲ್ದಾಣದಲ್ಲಿ ಒಂಟಿಯಾಗಿ ದಿಕ್ಕು ತಪ್ಪಿ ಭಯ ಗೊಂಡಿದ್ದರು. ವಿಚಾರಿಸಿದಾಗ ಕಾಜೂರು ಕಡೆಯವರೆಂದು ತಿಳಿದು ಬಂತು. ಕಾಜೂರಿನ ದರ್ಗಾ ಶರೀಫ್ ನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ರವರ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿದರು. ಅಬ್ದುಲ್ ಕರೀಮ್ ರವರು ಸ್ಥಳೀಯ ಅಟೋ ಚಾಲಕ ಹಿರಿಯರಾದ ಶೇಖುಂಙ ಎಸ್ ಮತ್ತು ಗೂಡಂಗಡಿ ಹಸೈನಾರ್ ಹಾಜಿ ರವರ ಸಹಕಾರದಲ್ಲಿ ಕಾಜೂರಿನ ಅವರ ಮಗಳ ಮನೆಗೆ ಅಬ್ದುಲ್ ಕರೀಮ್ ಹೋಗಿ ಈ ವೃದ್ದೆಯನ್ನು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News