×
Ad

ಮಿಸ್ಬಾ ಮಹಿಳಾ ಪಿಯು ಕಾಲೇಜಿನಲ್ಲಿ ಪ್ರೇರಣಾ ಶಿಬಿರ

Update: 2025-06-26 17:55 IST

ಕಾಟಿಪಳ್ಳ: ಮಿಸ್ಬಾ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೇರಣಾ ಶಿಬಿರ ಮತ್ತು ಅಭಿನಂದನಾ ಕಾರ್ಯ ಕ್ರಮ ಜರುಗಿತು. ಕಾಲೇಜಿನ ಮುಖ್ಯಸ್ಥ ಹಾಜಿ ಬಿ.ಎಂ. ಹೈದರ್ ಅಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಡಾ. ಎಂ. ಎಸ್. ಎಂ. ಝೈನಿ ಕಾಮಿಲ್, ಕಾಲೇಜಿನ ಪ್ರಾಂಶುಪಾಲೆ ಝಹೀದ ಜಲೀಲ್ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.

ಈ ಸಂದರ್ಭ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಸಂಚಾಲಕ ಬಿ.ಎ. ನಝೀರ್, ಟ್ರಸ್ಟಿ ಫಕ್ರುದ್ದೀನ್, ಮೌಲಾನ ಅಶ್ರಫ್ ಸಖಾಫಿ, ಹಬೀಬ್, ಪಪೂ. ಕಾಲೇಜಿನ ಪ್ರಾಂಶುಪಾಲೆ ಮುಫೀದಾ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಸೋನಾ ಸನ್ಮಾನಿತ ವಿದ್ಯಾರ್ಥಿನಿಯರ ಪಟ್ಟಿ ವಾಚಿಸಿದರು. ಸೌಮ್ಯಾ ವಂದಿಸಿದರು. ಸುಝನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News