ಕರಂಬಾರು: ನೇತ್ರ ತಪಾಸಣಾ ಶಿಬಿರ
ಬಜ್ಪೆ: ಇನ್ನರ್ ವಿಲ್ ಕ್ಲಬ್ ಮಂಗಳೂರು ದಕ್ಷಿಣ, ನಾಗರಿಕ ಸೇವಾ ಸಮಿತಿ (ರಿ) ಅಂಬೇಡ್ಕರ್ ನಗರ ಕರಂಬಾರು, ಪ್ರಾಥಮಿಕ ಆರೋಗ್ಯ ಕೇಂದ್ರ ಬೊಂದೆಲ್, ನಮ್ಮ ಕ್ಲಿನಿಕ್ ಮಳವೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಕರಂಬಾರು ಶಾಲಾ ಸಭಾಂಗಣದಲ್ಲಿ ನಡೆಯಿತು.
ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಭೋಜರಾಜ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸವಿತಾ ಜಿ.ಎಸ್.ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶೀಜಾ ನಂಬಿಯಾರ್, ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿ ಡಾ.ಪ್ರೇಮ್, ಇನ್ನರ್ ವೀಲ್‌ನ ಪ್ರಮುಖರಾದ ಕಲಾವತಿ ಬಿ., ಶಬರಿ ಭಂಡಾರಿ, ಲತಾ ಅಶೋಕ್, ಮಳವೂರು ಗ್ರಾಪಂ ಮಾಜಿ ಸದಸ್ಯರಾದ ಲಕ್ಷ್ಮಣ್ ಬಂಗೇರ, ಶಶಿಕಲಾ ನಮ್ಮ ಕ್ಲಿನಿಕ್‌ನ ಗಾಯತ್ರಿ ಮತ್ತಿತರರು ಭಾಗವಹಿಸಿದ್ದರು.
ತೃಪ್ತಿ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು. ರಾಕೇಶ್ ಕುಂದರ್ ಸ್ವಾಗತಿಸಿದರು. ನವೀನ್‌ಚಂದ್ರ ಸಾಲ್ಯಾನ್ ವಂದಿಸಿದರು.