ಗ್ರಾಮೀಣ ಪತ್ರಕರ್ತರಿಗೆ ಮುಖ್ಯಮಂತ್ರಿ ಬಸ್‌ಪಾಸ್ ವಿತರಣೆ
ಮಂಗಳೂರು: ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ವಿತರಣೆ ಕಾರ್ಯಕ್ರಮವು ಮಂಗಳವಾರ ಬೆಂಗಳೂರಿನ ವಾರ್ತಾಭವನದಲ್ಲಿ ನಡೆಯಿತು.
ದ.ಕ.ಜಿಲ್ಲೆಯಿಂದ ಉಳ್ಳಾಲದ ವಾರ್ತಾಭಾರತಿ ವರದಿಗಾರ ಅಬ್ದುಲ್ ಬಶೀರ್ ಕಲ್ಕಟ್ಟ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಸ್ ಪಾಸ್ ಹಸ್ತಾಂತರ ಮಾಡಿದರು.
ಈ ಸಂದರ್ಭ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಕರ್ನಾಟಕ ಮಾಧ್ಯಮ ಅಕಾಡಮಿಯ ಅಧ್ಯಕ್ಷೆ ಆಯೇಷಾ ಖಾನಮ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ಆಯ್ಕೆ ಸಮಿತಿಯ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ಮತ್ತಿತರರು ಉಪಸ್ಥಿತರಿದ್ದರು.
*ಜಿಲ್ಲಾಮಟ್ಟದಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿ ಆಯ್ಕೆ ಆದವರಿಗೆ ಶೀಘ್ರ ಬಸ್‌ಪಾಸ್ ವಿತರಿಸಲಾಗುವುದು. ಇನ್ನೂ ಅರ್ಜಿ ಸಲ್ಲಿಸದವರು ಆನ್‌ಲೈನ್ ಮೂಲಕ ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಭಾಗದ ಎಲ್ಲಾ ಪತ್ರಕರ್ತರಿಗೆ ಬಸ್ ಪಾಸ್ ಪಡೆಯಲು ಸಹಾಯವಾಗುವ ದೃಷ್ಟಿಯಿಂದ ಈಗಿರುವ ನಿಯಮವನ್ನು ಸರಳಿಕರಣಗೊಳಿಸಬೇಕು ಹಾಗೂ ಅರೆಕಾಲಿಕ ವರದಿಗಾರರಿಗೂ ಇದರ ಸೌಲಭ್ಯ ನೀಡಬೇಕೆಂದು ಕಳೆದ ಸಭೆಯಲ್ಲಿ ರಾಜ್ಯ ಸರಕಾರಕ್ಕೆ ಸಮಿತಿ ಶಿಫಾರಸ್ಸು ಮಾಡಿದೆ ಎಂದು ಪ್ರಕಟನೆ ತಿಳಿಸಿದೆ.