×
Ad

ಸುರತ್ಕಲ್:‌ ಚಿಕಿತ್ಸೆ ಫಲಕಾರಿಯಾಗದೆ ಪೊಲೀಸ್‌ ಕಾನ್ ಸ್ಟೇಬಲ್‌ ಮೃತ್ಯು

Update: 2025-07-28 20:12 IST

ಸುರತ್ಕಲ್:‌ ಔಷಧಿಯೆಂದು ತಪ್ಪಾಗಿ ಗ್ರಹಿಸಿ ಇಲಿಪಾಷಣ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಂಗಳೂರು ಉತ್ತರ ಸಂಚಾರ ಪೊಲೀಸ್‌ ಠಾಣೆಯ ಕಾನ್ ಸ್ಟೇಬಲ್‌ ಬಾಕ್ರಬೈಲ್‌ ಮಂಜುನಾಥ್‌ ಹೆಗ್ಡೆ (44) ಚಿಕಿತ್ಸೆ ಫಲಕಾರಿಯಾಗದೆ ರವಿವಾರ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಕೆಲ ವರ್ಷಗಳ ಹಿಂದೆ ಕರ್ತವ್ಯನಿರತ ಮಂಜುನಾಥ್‌ ಹೆಗ್ಡೆ ಅಪಘಾತಕ್ಕೀಡಾಗಿದ್ದರು. ಬಳಿಕ ನಿರಂತರ ವಾಗಿ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಯುರ್ವೇದ ಔಷಧಿಯನ್ನು ಪಡೆಯುತ್ತಿದ್ದ ಅವರು ಸುರತ್ಕಲ್‌ ಚೇಳಾಯರು ಬಳಿ ಇದ್ದ ಮನೆಯಲ್ಲಿ ಔಷಧಿಯೆಂದು ತಪ್ಪಾಗಿ ಗ್ರಹಿಸಿ ಇಲಿ ಪಾಷಣ ಸೇವಿಸಿ ಅಸೌಖ್ಯಕ್ಕೀಡಾಗಿದ್ದರು. ತಕ್ಷಣವ ಅವರನ್ನು ಸುರತ್ಕಲ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಎ.27 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮೂಲತಃ ಹರೇಕಳ ದೆಬ್ಬೇಲಿ ನಿವಾಸಿಯಾಗಿರುವ ಇವರು, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News