ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್ ನಲ್ಲಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ
ಮಂಗಳೂರು, ಜು. 28: ಮಂಗಳೂರಿನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್ (BIES) ಸಂಸ್ಥೆಯಲ್ಲಿ ನೂತನವಾಗಿ BCA, B.Com ಮತ್ತು BBA ಕೋರ್ಸ್ ಗಳಿಗೆ ಸೇರ್ಪಡೆಯಾದ ವಿದ್ಯಾರ್ಥಿ ಗಳಿಗೆ BIT ಕ್ಯಾಂಪಸ್ ನ ಅಂತರರಾಷ್ಟ್ರೀಯ ಸೆಮಿನಾರ್ ಹಾಲ್ ನಲ್ಲಿ ಸೋಮವಾರ ಓರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವು BIES ನ ಉಪ ಪ್ರಾಂಶುಪಾಲರಾದ ನಿಝಾಮುದ್ದೀನ್ ಅವರ ಉದ್ಘಾಟನಾ ಭಾಷಣ ದೊಂದಿಗೆ ಆರಂಭವಾಯಿತು. ವಿದ್ಯಾರ್ಥಿಗಳು ಹಾಗೂ ಪೋಷಕರು, ಸಂಸ್ಥೆಯ ಗುರಿ, ಶೈಕ್ಷಣಿಕ ವ್ಯವಸ್ಥೆ ಮತ್ತು ನಿರೀಕ್ಷೆಗಳ ಬಗ್ಗೆ ಸಂಪೂರ್ಣ ಅರಿವು ಪಡೆಯಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯುಎಇಯ ಕಾಸ್ಮೋಪಾಲಿಟನ್ ಅಂತರರಾಷ್ಟ್ರೀಯ ಶಾಲೆಯ ಉಪ ಪ್ರಾಂಶುಪಾಲರಾದ ಮೊಹಮ್ಮದ್ ರಿಝ್ವಾನ್ ಭಾಗವಹಿಸಿದ್ದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಾಭಿವೃದ್ಧಿ, ಶಿಕ್ಷಣ ಹಾಗೂ ವ್ಯಕ್ತಿತ್ವ ವಿಕಾಸದ ಅಗತ್ಯತೆ ಕುರಿತು ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT) ನ ಪ್ರಾಂಶುಪಾಲರಾದ ಡಾ. ಎಸ್.ಐ. ಮಂಜುರ್ ಬಾಷಾ ಮಾತನಾಡಿ, ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯನ್ನು ಎದುರಿಸಲು ವಿದ್ಯಾರ್ಥಿಗಳು ಶೈಕ್ಷಣಿಕ ಜ್ಞಾನದ ಜೊತೆಗೆ ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅವಶ್ಯಕ ಎಂದು ಕಿವಿಮಾತು ಹೇಳಿದರು.
BIES ನ ಪ್ರಾಂಶುಪಾಲ ಡಾ. ಅಝೀಝ್ ಮುಸ್ತಫಾ ಸಂಸ್ಥೆಯ ಹಿನ್ನೆಲೆ, ಶೈಕ್ಷಣಿಕ ಗುರಿಗಳು ಮತ್ತು ವಿದ್ಯಾರ್ಥಿಗಳಿಗೆ ಒದಗಿಸಲಾಗುವ ಸಹಾಯ ವ್ಯವಸ್ಥೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ BEADS (ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್) ನ ಪ್ರಾಂಶುಪಾಲ ಆರ್ಚಿಟೆಕ್ಟ್ ಖಲೀಲ್ ರಝಾಕ್ ಶೇಖ್, ಬಿಐಟಿ ಪಾಲಿಟೆಕ್ನಿಕ್ ನ ನಿರ್ದೇಶಕ ಪ್ರೊ. ಪೃಥ್ವಿರಾಜ್ ಎಂ, ಮತ್ತು ಬ್ಯಾರೀಸ್ ಇಂಟಿಗ್ರೇಟೆಡ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಅಬ್ದುಲ್ ಲತೀಫ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಅಧ್ಯಾಪಕ ಮಂಡಳಿಯ ಸದಸ್ಯರು, ವಿಭಾಗದ ಮುಖ್ಯಸ್ಥರು, ನೂತನ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮವನ್ನು ಸುಹದಾ ನಿರೂಪಿಸಿದರು. BIES ನ ಅಧ್ಯಾಪಕಿ ಝಕಿಯಾ ಫಾತಿಮಾ ವಂದಿಸಿದರು.