ಪಣಂಬೂರು | ಕಡಲ ತೀರದಲ್ಲಿ ಬೆಂಗಳೂರು ಮೂಲದ ಇಬ್ಬರ ಮೃತದೇಹ ಪತ್ತೆ
Update: 2023-10-19 13:04 IST
ಸಾಂದರ್ಭಿಕ ಚಿತ್ರ
ಪಣಂಬೂರು: ಪಣಂಬೂರು ಕಡಲ ತೀರದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಗುರುವಾರ ಬೆಳಗ್ಗೆ ವರದಿಯಾಗಿದೆ.
ಮೃತರನ್ನು ಲಕ್ಷ್ಮೀ (43), ಬೋರಲಿಂಗಯ್ಯ (50) ಮೃತಪಟ್ಟವರು ಎಂದು ತಿಳಿದು ಬಂದಿದ್ದು, ಇಬ್ಬರು ಬೆಂಗಳೂರು ಮೂಲದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಮನೆಯಿಂದ ಇಬ್ಬರೂ ನಾಪತ್ತೆಯಾಗಿದ್ದರು ಎಂಬ ಮಾಹಿತಿಯನ್ನು ಕಲೆಹಾಕಿರುವ ಪಣಂಬೂರು ಪೊಲೀಸರು ಮೃತರ ಬಳಿಯಿದ್ದ ಆಧಾರ್ ಕಾರ್ಡ್ ನಿಂದಾಗಿ ಅವರ ಪತ್ತೆ ಹಚ್ಚಲಾಗಿದೆ. ಸದ್ಯ ಅವರ ಕುಟುಂಬಕ್ಕೆ ಮಾಹಿತಿ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಶಂಕೆ ವ್ಯಕ್ತವಾಗಿದ್ದು, ಸ್ಥಳೀಯ ಜೀವ ರಕ್ಷಕರ ಸಹಾಯದಿಂದ ಮೃತದೇಹಗಳನ್ನು ಸಮುದ್ರದಿಂದ ಮೆಲಕ್ಕೆತ್ತಿ ಶವಾಗಾರಕ್ಕೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.