ಉಪ್ಪಿನಂಗಡಿ: ಸಾರ್ವಜನಿಕ ಶಾಂತಿಭಂಗ; ಐವರ ವಿರುದ್ಧ ಪ್ರಕರಣ ದಾಖಲು
Update: 2023-08-07 21:16 IST
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೆಲ್ಯಾಡಿಯ ಬೆಥನಿ ಕಾಲೇಜು ಬಳಿಯ ರಸ್ತೆಯಲ್ಲಿ ಸೈಡ್ ಕೊಡುವ ವಿಚಾರದಲ್ಲಿ ಜಗಳಕ್ಕಿಳಿದಿದ್ದ ಐವರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಸಾರ್ವಜನಿಕ ಶಾಂತಿ ಭಂಗ ಪ್ರಕರಣದಡಿ ಕೇಸು ದಾಖಲಿಸಿಕೊಂಡ ಘಟನೆ ನಡೆದಿದೆ.
ಆರೋಪಿಗಳಾದ ಮಹೇಶ್ ಕೆ (30), ಅಶ್ವಥ್ (26), ಸ್ವರೂಪ್ ಪಟ್ಟೆ (25), ಅಖಿಲೇಶ್ (21) ಲಕ್ಷ್ಮಣ ಗೌಡ (45) ಎಂಬವರು ಭಯ ಮೂಡಿಸುವ ರೀತಿಯಲ್ಲಿ ಸಂಘರ್ಷ ನಿರತರಾಗಿರುವುದನ್ನು ಕಂಡ ಪೊಲೀಸರು 2 ಬೈಕುಗಳನ್ನು 5 ಮೊಬೈಲ್ ಗಳ ಸಹಿತ ಆರೋಪಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.