ಮಂಗಳೂರು ವಿವಿ ಕಾಲೇಜಿನಲ್ಲಿ ತುಳು ಪರ್ಬ
ಮಂಗಳೂರು, ಡಿ.10: ಶಿಕ್ಷಕ - ಶಿಕ್ಷಣ ರಂಗ ಶಿಶಿರದ ಆಶ್ರಯದಲ್ಲಿ, ಮಂಗಳೂರು ವಿ.ವಿ. ಕಾಲೇಜಿನ ಕನ್ನಡ ವಿಭಾಗ ಮತ್ತು ತುಳು ಎಂ.ಎ.ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ತುಳು ಭಾಷಾ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿಯು ಇತ್ತೀಚೆಗೆ ವಿವಿ ಕಾಲೇಜಿನಲ್ಲಿ ನಡೆಯಿತು.
ರಾಜ್ಯ ವಿಧಾನ ಸಭೆಯ ಅಧ್ಯಕ್ಷ ಯು.ಟಿ. ಖಾದರ್ ಫರೀದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತುಳು ನಾಡಿನ ಕೃಷಿ ಬದ್ಕ್-ಪಿರಾಕ್ ಇನಿ-ಎಲ್ಲೆ ಎಂಬ ವಿಷಯದಲ್ಲಿ ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ.ಜ್ಯೋತಿ ಚೇಳ್ಯಾರ ಪ್ರಬಂಧ ಮಂಡಿಸಿದರು. ಡಾ. ತುಕರಾಂ ಪೂಜಾರಿ ತುಳುನಾಡಿನ ಸಂಸ್ಕೃತಿಯ ಜೀವನ ವಿಧಾನದ ಬಗ್ಗೆ ಉಪನ್ಯಾಸ ನೀಡಿದರು. ಡಾ.ದಿನಕರ ಪಚ್ಚನಾಡಿ ಯಕ್ಷಗಾನ ಪರಂಪರೆಯಲ್ಲಿ ತುಳು ಭಾಷಾ ವ್ಯವಸಾಯ ನಡೆದುಕೊಂಡ ಬಗ್ಗೆ ಪ್ರಬಂಧ ಮಂಡಿಸಿದರು. ಪ್ರಾಧ್ಯಾಪಕಿ ಜ್ಞಾನೇಶ್ವರಿ ಗೋಷ್ಠಿ ನಡೆಸಿಕೊಟ್ಟರು.
ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಮಂಗಳೂರು ವಿಶ್ವ ವಿದ್ಯಾನಿಲಯದ ಧರ್ಮಸ್ಥಳ ತುಳು ಪೀಠದ ಸಂಯೋಜಕ ಡಾ.ಧನಂಜಯ ಕುಂಭ್ಳೆ ಸಮಾರೋಪ ಭಾಷಣ ಮಾಡಿದರು.
ವೇದಿಕೆಯಲ್ಲಿ ಪ್ರೊ.ಜಯವಂತ, ಪರಿಣಿತ ಶೆಟ್ಟಿ, ಶಿಶಿರ ಅಧ್ಯಕ್ಷ ಸುಭಾಶ್ಚಂದ್ರ ಕಣ್ವತೀರ್ಥ, ಉಪಾಧ್ಯಕ್ಷ ಜಿ.ಕೆ.ಭಟ್, ತುಳು ಎಂ.ಎ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹರೀಶ್ ಅಮೈ, ಕಾರ್ಯದರ್ಶಿ ಮೇಘಾ ಡಾ. ಮಾಧವ, ಚೇತನ್ ಆರ್ ಉಪಸ್ಥಿತರಿದ್ದರು. ಪ್ರಸಾದ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.