×
Ad

ಪಣಂಬೂರು: ದ್ವಿಚಕ್ರ ವಾಹನ-ಲಾರಿ ಢಿಕ್ಕಿ; ಇಬ್ಬರು ಗಂಭೀರ

Update: 2023-10-11 16:02 IST

ಪಣಂಬೂರು: ದ್ವಿಚಕ್ರ ವಾಹನ ಮತ್ತು ಲಾರಿ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಪಣಂಬೂರು ಜಂಕ್ಷನ್ ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಗಾಯಗೊಂಡವರನ್ನು ಕೇರಳದ ಯಹ್ಯಾ ಮತ್ತು ಸಹಸವಾರ ಅಬ್ಬಾಸ್ ಎಮದು ಗುರುತಿಸಲಾಗಿದೆ. ಆರೋಪಿ ಲಾರಿ ಚಾಲಕನ ಹೆಸರು ಸುಬ್ರಮಣಿ ಎಂದು ಪೊಲೀಸರು ತಿಳಿಸಿದ್ದಾರೆ.

ಯಹ್ಯಾ ಮತ್ತು ಅಬ್ಬಾಸ್ ಅವರು ರಾ.ಹೆ. 66ರಲ್ಲಿ ಮುಕ್ಕ ಕಡೆಯಿಂದ ಕೂಳೂರು ಕಡೆ ತೆರಳುತ್ತಿದ್ದ ವೇಳೆ ರಾತ್ರಿ 11.45 ರ ಸುಮಾರಿಗೆ ಅದೇ ರಸ್ತೆಯಾಗಿ ತೆರಳುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯ ಹಾಗೂ ದುಡುಕು ತನದಿಂದ ಪಣಂಬೂರು ವೃತ್ತದ ಬಳಿ‌ ಯಾವುದೇ ಮುನ್ಸೂಚನೆ ನೀಡದೆ ಯೂ ಟರ್ನ್ ತೆಗೆದುಕೊಂಡಿದ್ದಾನೆ. ಈ‌ವೇಳೆ‌  ದ್ವಿಚಕ್ರ ವಾಹನ ಲಾರಿಗೆ ಢಿಕ್ಕಿ ಹೊಡೆಯಿತನ್ನಲಾಗಿದೆ.

ಘಟನೆಯಿಂದ ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದು, ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News