×
Ad

ಮಿಗ್-21 ಯುದ್ಧ ವಿಮಾನಕ್ಕೆ ಸೆ.26ರಂದು ವಿದಾಯ

Update: 2025-09-24 21:38 IST

ಮಿಗ್-21 ಯುದ್ಧ ವಿಮಾನ | PC : PTI

ಚಂಡೀಗಢ, ಸೆ. 24: ಆರು ದಶಕಗಳಿಗೂ ಅಧಿಕ ಕಾಲ ಭಾರತೀಯ ವಾಯು ಪಡೆಯ ಬೆನ್ನೆಲುಬಾಗಿದ್ದ ರಷ್ಯಾ ನಿರ್ಮಿತ ಮಿಗ್-21 ಯುದ್ಧ ವಿಮಾನ ಸೆಪ್ಟಂಬರ್ 26ರಂದು ಸೇವೆಯಿಂದ ನಿವೃತ್ತಿ ಪಡೆಯಲಿದೆ.

ನಂಬರ್ 23 ಸ್ಕ್ವಾಡ್ರನ್‌ನ ಮಿಗ್-21 ಯುದ್ಧ ವಿಮಾನಗಳ ಪೈಕಿ ಕೊನೆಯ ಯುದ್ಧ ವಿಮಾನವಾಗಿರುವ, ‘‘ಪ್ಯಾಂಥರ್’’ ಎಂದು ಕರೆಯಲಾಗುವ ಮಿಗ್-21 ಯುದ್ಧ ವಿಮಾನದ ವಿದಾಯ ಕಾರ್ಯಕ್ರಮವನ್ನು ಚಂಡೀಗಢದ ವಾಯು ಪಡೆಯ ವಾಯುನೆಲೆಯಲ್ಲಿ ಆಯೋಜಿಸಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ (ಸಿಡಿಆರ್), ಸೇನಾ ವರಿಷ್ಠ ಜನರಲ್ ಉಪೇಂದ್ರ ದ್ವಿವೇದಿ, ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಹಾಗೂ ನೌಕಾ ಪಡೆಯ ವರಿಷ್ಠ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಶುಕ್ರವಾರ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಪ್ರಮುಖರು.

ಕಾರ್ಯಕ್ರಮದ ಅಂಗವಾಗಿ ಭಾರತೀಯ ವಾಯು ಪಡೆಯ ವಾಯು ನೆಲೆಯಲ್ಲಿ ಬುಧವಾರ ಸಮವಸ್ತ್ರ ಧರಿಸಿ ಅಭ್ಯಾಸ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News