×
Ad

ಥಾಣೆ ಅಪಾರ್ಟ್‌ಮೆಂಟ್‌ ಕಟ್ಟಡದ ಎರಡನೇ ಅಂತಸ್ತಿನ ಫ್ಲ್ಯಾಟ್‌ ಛಾವಣಿ ಕುಸಿತ | ಹಿರಿಯ ದಂಪತಿ, ಪುತ್ರನಿಗೆ ಗಾಯ

Update: 2024-06-13 12:22 IST

Photo: deccanherald

ಥಾಣೆ: ಮಹಾರಾಷ್ಟ್ರದ ಥಾಣೆ ನಗರದ ಕಲ್ವಾ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಅಪಾರ್ಟ್‌ಮೆಂಟ್‌ ಕಟ್ಟಡದ ಎರಡನೇ ಅಂತಸ್ತಿನ ಛಾವಣಿ ಕುಸಿದ ಪರಿಣಾಮ ಹಿರಿಯ ದಂಪತಿ ಮತ್ತು ಅವರ ಪುತ್ರ ಗಾಯಗೊಂಡಿದ್ದಾರೆ. ಘಟನೆ ಬುಧವಾರ ಮಧ್ಯರಾತ್ರಿ ವೇಳೆ ನಡೆದಿದೆ.

ಓಂ ಕೃಷ್ಣ ಕೊ-ಆಪರೇಟಿವ್‌ ಹೌಸಿಂಗ್‌ ಸೊಸೈಟಿಯ ಈ ಕಟ್ಟಡ 35 ವರ್ಷ ಹಳೆಯದಾಗಿದ್ದು ಇದು ಅಸುರಕ್ಷಿತ, ಅಪಾಯಕಾರಿ ಕಟ್ಟಡ ಎಂದು ನಿರ್ಧರಿಸಿ ಅದನ್ನು ತೆರವುಗೊಳಿಸಿ ನೆಲಸಮಗೊಳಿಸಲು ಸ್ಥಳೀಯಾಡಳಿತ ಹಿಂದೆಯೇ ಗುರುತಿಸಿತ್ತು.

ಛಾವಣಿ ಕುಸಿತದ ಬೆನ್ನಲ್ಲೇ ಈ ಕಟ್ಟಡದಲ್ಲಿದ್ದ 30 ಫ್ಲ್ಯಾಟ್‌ಗಳ 100 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಘಟನೆಯ ನಂತರ ಕಟ್ಟಡವನ್ನು ಸೀಲ್‌ ಮಾಡಲಾಗಿದೆ.

ಗಾಯಾಳುಗಳಾದ ಮನೋಹರ್‌ ದಾಂಡೇಕರ್‌ (70), ಅವರ ಪತ್ನಿ ಮನೀಶಾ (65) ಹಾಗೂ ಪುತ್ರ ಮಯೂರ್‌ )40) ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News